ಯುವಕ ನಾಪತ್ತೆ
Update: 2016-08-06 23:45 IST
ಕಾಸರಗೋಡು, ಆ.6: ಎರ್ನಾಕುಲಂಗೆ ಹೋಟೆಲ್ ಕೆಲಸಕ್ಕೆಂದು ತೆರಳಿದ್ದ ಯುವಕ ನಾಪತ್ತೆಯಾಗಿರುವಬಗ್ಗೆ ಅಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಡೂರು ಚಿನ್ನಪ್ಪಾಡಿಯ ಮುಹಮ್ಮದ್ ಎಂಬವರ ಪುತ್ರ ಅಬ್ದುಲ್ ಹಾರಿಸ್(20) ನಾಪತ್ತೆಯಾದವರು. ಆರು ತಿಂಗಳಿಂದ ಇವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಪೊಲೀಸರಿಗೆ ಮನೆಯವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಒಂದು ವರ್ಷದ ಹಿಂದೆ ಈತ ಹೋಟೆಲ್ ಕೆಲಸಕ್ಕೆಂದು ಎರ್ನಾಕುಲಂಗೆ ತೆರಳಿದ್ದು, ಆರು ತಿಂಗಳ ಕಾಲ ಮನೆಯವರ ಜೊತೆ ಸಂಪರ್ಕದಲ್ಲಿದ್ದರು. ಆದರೆ ಇದೀಗ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.