ಯುವಕನಿಗೆ ಹಲ್ಲೆ ನಡೆಸಿ ಜೀವಬೆದರಿಕೆ: ದೂರು
Update: 2016-08-06 23:48 IST
ಪುತ್ತೂರು, ಆ.6: ಯುವಕನೊಬ್ಬನಿಗೆ ತಂದೆ ಮತ್ತು ಮಗ ಸೇರಿಕೊಂಡು ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ ಘಟನೆ ಶುಕ್ರವಾರ ರಾತ್ರಿ ಪುತ್ತೂರು ನಗರದ ಹೊರವಲಯದ ಪರ್ಲಡ್ಕ ಎಂಬಲ್ಲಿ ನಡೆದಿದೆ. ಪುತ್ತೂರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಅಬ್ದುರಹ್ಮಾನ್ ಅವರ ಪುತ್ರ ನಾಸಿರುದ್ದೀನ್(23) ಹಲ್ಲೆಗೊಳಗಾದವರು. ಶುಕ್ರವಾರ ರಾತ್ರಿ ನಾಸಿರುದ್ದೀನ್ ಪುತ್ತೂರಿನ ಪರ್ಲಡ್ಕದಲ್ಲಿ ತನ್ನ ಸ್ನೇಹಿತರಾದ ಸರ್ದಾರ್ ಮತ್ತು ಶಾಹಿದ್ ಎಂಬವರ ಜೊತೆ ಮಾತನಾಡುತ್ತಿದ್ದ ಸಂದರ್ಭ ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ನಿವಾಸಿ, ನಿವೃತ್ತ ಅಂಚೆ ನೌಕರ ಅಬ್ದುರಹ್ಮಾನ್ ಮತ್ತು ಅವರ ಪುತ್ರ ಹರ್ಷದ್ ಎಂಬವರು ತನಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿದ್ದಾರೆ. ಹಲ್ಲೆಗೊಳಗಾಗಿರುವ ನಾಸಿರುದ್ದೀನ್ ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.