×
Ad

ನಿಧನ

Update: 2016-08-06 23:49 IST

ಸಿಪಿಎಂ ಮುಖಂಡ ಹುಸೈನ್ ಪಾವೂರು

ಕೊಣಾಜೆ, ಆ.6: ಸಿಪಿಎಂ ಹಿರಿಯ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಹಾಜಿ ಹುಸೈನ್ ಪಾವೂರು (63) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹರೇಕಳದಲ್ಲಿ ಡಿವೈಎಫ್‌ಐ ಮೂಲಕ ಗ್ರಾಪಂ ಸಹಿತ ಸಮಾಜಪರ ಹೋರಾಟದಲ್ಲಿ ಅವರು ಗುರುತಿಸಿಕೊಂಡಿದ್ದರು. ಉಳ್ಳಾಲ ವಲಯ ಕಾರ್ಯದರ್ಶಿಯಾಗಿ ಸಿಪಿಐಎಂನಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಧಾರ್ಮಿಕ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದ ಅವರು ಆಲಡ್ಕ ಬದ್ರಿಯಾ ಜುಮಾ ಮಸೀದಿಯಲ್ಲಿ ಐದು ವರ್ಷ ಪ್ರಧಾನಕಾರ್ಯದರ್ಶಿಯಾಗಿದ್ದರು. ಸಿಪಿಎಂ ಜಿಲ್ಲಾ ಮುಖಂಡ ಸುನೀಲ್ ಕುಮಾರ್ ಬಜಾಲ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ಪ್ರಮುಖರಾದ ಬಾಬು ಪಿಲಾರ್, ಜಯಂತ ನಾಯ್ಕಾ, ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ವಸಂತ ಆಚಾರಿ, ಮಹಾಬಲ ದೆಪ್ಪೆಲಿಮಾರ್, ರಫೀಕ್ ಹರೇಕಳ ಸಹಿತ ಹಲವಾರು ಮುಖಂಡರು ಮೃತರ ಅಂತಿಮ ದರ್ಶನ ಪಡೆದರು. ಹುಸೈನ್ ಹಾಜಿ ನಿಧನ ಸಚಿವ ಯು.ಟಿ.ಖಾದರ್ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News