×
Ad

ಮೊದಲ ದಿನ ಭಾರತದ ಕಳಪೆ ಪ್ರದರ್ಶನ; ಗುರಿ ತಪ್ಪಿದ ಜಿತು ಪದಕದ ಬೇಟೆ , 8ನೆ ಸ್ಥಾನ

Update: 2016-08-07 09:39 IST

ರಿಯೋ ಡಿ ಜನೈರೋ,ಆ .7: ಭಾರತದ ಶೂಟರ್ ಜಿತು ರಾಯ್‌  ರಿಯೋ ಒಲಿಂಪಿಕ್ಸ್​ನ ಪುರುಷರ 10 ಮೀಟರ್ ಏರ್​ಪಿಸ್ತೂಲ್ ವಿಭಾಗದಲ್ಲಿ ಫೈನಲ್​ನಲ್ಲಿ ನಿರಾಸೆ ಅನುಭವಿಸಿದರು. ಫೈನಲ್‌ನಲ್ಲಿ ಎಂಟನೆ ಸ್ಥಾನಕ್ಕೆ ತೃಪ್ತಿಪಟ್ಟರು.
 ಅರ್ಹತಾ ಸುತ್ತಿನಲ್ಲಿ 580 ಅಂಕ ಕಲೆಹಾಕುವ ಮೂಲಕ 6ನೆ ಸ್ಥಾನದೊಂದಿಗೆ  ಫೈನಲ್ ಪ್ರವೇಶಿಸಿದ್ದ   ಜಿತು ಕ್ರೀಡಾಕೂಟದ ಮೊದಲ ದಿನವೇ ಪದಕದ ನಿರೀಕ್ಷೆ ಮೂಡಿಸಿದ್ದರು. ಆದರೆ ಫೈನಲ್​ನಲ್ಲಿ  ಅವರು 78.7  ಅಂಕಗಳನ್ನು ಸಂಪಾದಿಸಿ ಎಂಟನೆ ಸ್ಥಾನವನ್ನು ತನ್ನದಾಗಿಸಿಕೊಂಡರು.

ಮೊದಲ ದಿನ ಭಾರತದ ಖಾತೆಗೆ ಯಾವುದೇ ಪದಕ ದೊರೆಯಲಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News