ಫ್ರಾನ್ಸ್ ಜಿಮ್ನಾಸ್ಟ್ ಸಮೀರ್ ಐತ್ ಸಯೀದ್ ಪದಕ ಕನಸು ನುಚ್ಚುನೂರು
Update: 2016-08-07 12:00 IST
ರಿಯೊ ಡಿ ಜನೈರೊ, ಆ.7: ಫ್ರಾನ್ಸ್‌ನ ಪ್ರತಿಭಾವಂತ ಜಿಮ್ನಾಸ್ಟ್ ಸಮೀರ್ ಐತ್ ಸಯೀದ್ ಅವರ ಒಲಿಂಪಿಕ್ ಪದಕದ ಕನಸು ನುಚ್ಚುನೂರಾಗಿದೆ. ಶನಿವಾರ ನಡೆದ ಕಲಾತ್ಮಕ ಜಿಮ್ನಾಸ್ಟಿಕ್ ಅರ್ಹತಾ ಸುತ್ತಿನ ಸ್ಪರ್ಧೆಯ ವೇಳೆ ಅವರ ಕಾಲು ಮುರಿದಿದ್ದು, ಮೊಣಕಾಲಿನಿಂದ ಕೆಳಗೆ ನೇತಾಡುತ್ತಿದೆ. ಸ್ಪರ್ಧೆಯ ವೇಳೆ ಮೇಲಿನಿಂದ ಹಾರುತ್ತಿದ್ದಾಗ ಆಯ ತಪ್ಪಿ ಬಿದ್ದು ಈ ಅವಘಡ ಸಂಭವಿಸಿದೆ.
ಅಧಿಕಾರಿಗಳು ಕ್ರಾಷ್‌ಮ್ಯಾಟ್ ಬಳಿ ಧಾವಿಸುವ ಮುನ್ನವೇ, ಬಲಗೈಯಿಂದ ಕಣ್ಣು ಮುಚ್ಚಿಕೊಂಡು, ಮೊಣಗಾಲಿನ ಹಿಂಬದಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿದ್ದರು. ತಕ್ಷಣ ರಿಯೊ ಒಲಿಂಪಿಕ್ಸ್‌ನ ಮುಂದಿನ ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ ಎನ್ನುವುದು ಖಚಿತವಾಯಿಯಿತು. ಸ್ಟ್ರೆಚರ್‌ನಲ್ಲಿ ಅವರನ್ನು ಒಯ್ಯಲಾಯಿತು.
— Vartha Bharati (@varthabharati) August 7, 2016