ಬ್ಯಾರಿ ಗೈಸ್‌ನಿಂದ ಬಡ ಕುಟುಂಬಕ್ಕೆ ಮನೆ: ನಿರ್ಮಾಣಕ್ಕೆ ಚಾಲನೆ
Update: 2016-08-07 15:02 IST
ಕಡಬ, ಆ.7: ಬ್ಯಾರಿ ಗೈಸ್, ಕೆಎಸ್‌ಎ ಎರಡನೆ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನಿರ್ಮಿಸುತ್ತಿರುವ ಬಡ ಕುಟುಂಬದ ಮೂರನೆಯ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ಅಲ್ ಫಲಾಹ್ ಗಲ್ಫ್ ಕಮಿಟಿಯಿಂದ ಬ್ಯಾರಿ ಗೈಸ್‌ಗೆ ಚೆಕ್ ವಿತರಣಾ ಕಾರ್ಯಕ್ರಮವು ಶನಿವಾರ ಮರ್ಧಾಳದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅಸ್ಸೈಯದ್ ಅನಸ್ ತಂಙಳ್ ಗಂಡಿಬಾಗಿಲು, ಮರ್ದಾಳ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮತ್ತು ಬ್ಯಾರಿ ಗೈಸ್ ಕೆಎಸ್‌ಎ ಇದರ ಅಡ್ಮಿನ್ ಅನ್ಸಾರ್ ಮೂಡುಬಿದಿರೆ ಉಪಸ್ಥಿತರಿದ್ದರು.