ಮೆಲ್ಕಾರ್ ವುಮೆನ್ಸ್ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ
ಬಂಟ್ವಾಳ, ಆ. 7: ಕಾನೂನಿನ ಚೌಕಟ್ಟನ್ನು ಮೀರದೆ ದೃಢ ನಿಲುವು ಹಾಗೂ ಕಠಿಣ ಪರಿಶ್ರಮದಿಂದ ಓದಿ ಉನ್ನತ ವ್ಯಾಸಾಂಗ ಮಾಡಿದಾಗ ಜೀವನದಲ್ಲಿ ಯಶಸ್ವು ಖಂಡಿತಾ ಎಂದು ಎಂದು ದಕ್ಷಿಣ ಕನ್ನಡ ನಿರ್ಗಮಿತ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಮೆಲ್ಕಾರ್ ವುಮೆನ್ಸ್ ಪಿಯು ಮತ್ತು ಪದವಿ ಕಾಲೇಜಿನ 2016-17ನೆ ಸಾಲಿನ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ನ್ಯಾಯಕಿಯರಿಗೆ ಪ್ರತಿಜ್ಞೆ ಬೋಧಿಸಿದ ಬಳಿಕ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಪ್ರತೀಯೊಬ್ಬರ ಬಾಳು ಬೆಳಗಳು ಶಿಕ್ಷಣವೂ ಪರಿಣಾಮಕಾರಿಯಾದ ಅಸ್ತ್ರವಾಗಿದೆ. ಹೆಣ್ಣು ಕಲಿಯುವುದೇ ಅಪರಾಧ ಎಂಬ ಮನಸ್ಥಿತಿಯನ್ನು ಹೊಂದಿದ್ದ ಸಮುದಾಯದ ಹೆಣ್ಣು ಮಕ್ಕಳಿಗೆ ಸಜಿಪಮುನ್ನೂರುರಂತಹ ಕುಗ್ರಾಮದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಎಲ್ಲ ವ್ಯವಸ್ಥೆಗಳನ್ನೊಳಗೊಂಡ ಕಾಲೇಜು ನಿರ್ಮಾಣವಾಗಿರುವುದು ಕ್ರಾಂತಿಕಾರಕ ಬೆಳವಣಿಗೆಯಾಗಿದೆ ಎಂದರು.
ಕಾಲೇಜಿನ ಚೇರ್‌ಮ್ಯಾನ್ ಎಸ್.ಎಂ.ರಶೀದ್ ಹಾಜಿ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಎ.ಬಿ.ಇಬ್ರಾಹೀಂ ಮಾಡಿರುವ ಸಾಧನೆಯನ್ನು ಶಾಘ್ಲಹಿಸಿದರು.
ವೇದಿಕೆಯಲ್ಲಿ ಮಾಜಿ ಜಿಪಂ ಸದಸ್ಯ ಎಸ್.ಅಬ್ಬಾಸ್, ಹಮೀದ್ ಮಾಸ್ಟರ್, ಕಾಲೇಜಿನ ಪ್ರಾಶುಪಾಲರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಆಯಿಷಾ ಸನೂಪ ಸ್ವಾಗತಿಸಿದರು. ಆಯಿಷ ಧನ್ಯವಾದಗೈದರು. ನಶತ್ತುನ್ನಿಶಾ ಕಾರ್ಯಕ್ರಮ ನಿರೂಪಿಸಿದರು.