ಆಗಸ್ಟ್ 9 ರಂದು ಕೆಎಂಎಫ್ ವಿಚಾರ ಸಂಕಿರಣ
Update: 2016-08-07 19:34 IST
ಮಂಗಳೂರು, ಆ.7: ದ.ಕ. ಸಹಕಾರಿ ಹಾಲು ಒಕ್ಕೂಟವು ಆಗಸ್ಟ್ 9 ರಂದು ಬೆಳಗ್ಗೆ 9:30ಕ್ಕೆ ಮಂಗಳೂರಿನ ಕೆ.ಎಸ್.ರಾವ್ ರೋಡ್‌ನಲ್ಲಿರುವ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಆಡಿಟೋರಿಯಂನಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಿದೆ. ರೀಸೆಂಟ್ ಟ್ರೆಂಡ್ಸ್ ಇನ್ ಬ್ರೀಡಿಂಗ್ ಆ್ಯಂಡ್ ಪಾಲಿಸೀಸ್ ಎಂಬ ವಿಷಯದ ಬಗ್ಗೆ ಪ್ರೊ. ಪ್ರೇಮ್ ಕುಮಾರ್ ಉಪ್ಪಲ್ ಮತ್ತು ಡಿಸ್ಕ್ರಿಮಿನೇಟ್ ಯುಸೇಜ್ ಆಫ್ ವೆಟೆರನರಿ ಮಿಡಿಸಿನ್ಸ್ ವಿಷಯದ ಬಗ್ಗೆ ಪ್ರೊ.ಪ್ರಕಾಶ್ ನಾಡೂರ್ ಉಪನ್ಯಾಸ ನೀಡಲಿದ್ದಾರೆ ಎಂದು ದ.ಕ ಜಿಲ್ಲಾ ಹಾಲು ಒಕ್ಕೂಟದ ಪರವಾಗಿ ಪ್ರಕಟನೆ ತಿಳಿಸಿದೆ.