×
Ad

ಸೈಂಟ್ ಅಲೋಶಿಯಸ್ ಕಾಲೇಜು ತಂಡಕ್ಕೆ ಪ್ರಶಸ್ತಿ

Update: 2016-08-07 19:46 IST

ಮಂಗಳೂರು, ಆ.7: ದ.ಕ. ಜಿಲ್ಲಾ ಫುಟ್ಬಾಲ್ ಸಂಸ್ಥೆಯ ವತಿಯಿಂದ ನೆಹರೂ ಮೈದಾನದಲ್ಲಿ ನಡೆಯುತ್ತಿರುವ 20ನೆ ಇಂಡಿಯನ್ಸ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಕಾಲೇಜು ಮಹಿಳಾ ವಿಭಾಗದ ಫೈನಲ್ ಪಂದ್ಯಾಟದಲ್ಲಿ ಸೈಂಟ್ ಅಲೋಶಿಯಸ್ ಕಾಲೇಜು ತಂಡವು ಬಜ್ಪೆಯ ಸೈಂಟ್ ಜೋಸೆಫ್ ಕಾಲೇಜು ತಂಡವನ್ನು 1-0 ಗೋಲಿನಿಂದ ಸೋಲಿಸಿ ಪ್ರಥಮ ಪ್ರಶಸ್ತಿ ಪಡೆದುಕೊಂಡಿದೆ.

ಸೆಮಿಫೈನಲ್ ಪಂದ್ಯಾಟದಲ್ಲಿ ಸೈಂಟ್ ಅಲೋಶಿಯಸ್ ಕಾಲೇಜು ಪಾದುವಾ ಕಾಲೇಜು ತಂಡದ ವಿರುದ್ಧ 1-0 ಗೋಲಿನಿಂದ ಜಯ ಸಾಧಿಸಿದರೆ, ಕೆನರಾ ಕಾಲೇಜು ತಂಡದ ವಿರುದ್ಧ ಬಜ್ಪೆಯ ಸೈಂಟ್ ಜೋಸೆಫ್ ಪಿಯು ಕಾಲೇಜು ತಂಡ 5-0 ಗೋಲುಗಳಿಂದ ಜಯ ಗಳಿಸಿ ಫೈನಲ್ ಪ್ರವೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News