ಬೆಳ್ತಂಗಡಿ: ನಾಗರ ಪಂಚಮಿ ಆಚರಣೆ
ಬೆಳ್ತಂಗಡಿ,ಆ.7: ತಾಲೂಕಿನಲ್ಲಿ ಒಂದೆಡೆ ಸಾಂಪ್ರದಾಯಿಕವಾಗಿ ಸಂಭ್ರಮದಿಂದ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗಿದ್ದರೆ ಮತ್ತೊಂದೆಡೆ ಎ.ಕೆ.ಜಿ ಬೀಡಿ ಕಾಮಿಕರ ಗೃಹನಿರ್ಮಾಣ ಸಹಕಾರ ಸಂಘದ ನೇತೃತ್ವದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಾಗೂ ಬೆಳ್ತಂಗಡಿ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಬಿಸಿ ಹಾಲನ್ನು ವಿತರಿಸಿ ನಾಗರ ಪಂಚಮಿಯನ್ನು ವೈಚಾರಿಕ ರೀತಿಯಲ್ಲಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಹರಿದಾಸ್ ಎಸ್.ಎಂ ಅವರು ನಾಗರ ಪಂಚಮಿಯ ಹೆಸರಿನಲ್ಲಿ ಲಕ್ಷಾಂತರ ಲೀಟರ್ ಹಾಲನ್ನು ವ್ಯಯ ಮಾಡಲಾಗುತ್ತಿದೆ. ಹಾಲು ಇಲ್ಲದೆ ಮಕ್ಕಳು ಅಪೌಷ್ಟಿಕತೆಗೆ ಒಳಗಾಗುವಾಗ ಈ ದೇಶದಲ್ಲಿ ಈರೀತಿ ಹಾಲನ್ನು ಪೋಲು ಮಾಡುವುದು ಸರಿಯಾದ ಕ್ರಮವಲ್ಲ ಸಂಘದ ವತಿಯಿಂದ ಜನರಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಶಿವಕುಮಾರ್, ಸುಕನ್ಯ, ಶೇಖರ ಎಲ್, ಸುಜಿತ್, ಸುಧಾ ಕೆ ರಾವ್, ಅನಿಲ್, ಸುಹಾಸ್ ಮತ್ತಿತರರು ಉಪಸ್ಥಿತರಿದ್ದರು.