ನಿಮ್ಮನ್ನು ಗುಲಾಮರನ್ನಾಗಿಸುವ ಎಂಟು ಆಸಕ್ತಿಗಳು
ಜನರನ್ನು ತನ್ನತ್ತ ಆಕರ್ಷಿಸಿ ಗುಲಾಮರನ್ನಾಗಿಸುವ ಹಲವಾರು ವಸ್ತುಗಳು, ವಿಷಯಗಳು ಜಗತ್ತಿನಲ್ಲಿವೆ. ಎಷ್ಟೇ ಬೇಡವೆಂದು ಬಯಸಿದರೂ ಅದರಿಂದ ದೂರವಿರಲು ಸಾಧ್ಯವೇ ಆಗುವುದಿಲ್ಲ ಎಂಬಂತವು ಅವುಗಳು. ನಮಗೆ ತಿಳಿಯದಂತೆ ನಮ್ಮನ್ನು ಗುಲಾಮರನ್ನಾಗಿಸುವ ಆ ಚಟಗಳು ಯಾವುವು, ನೋಡಿ:
ಸ್ಮಾಟ್‌ಫೋನ್:
ಇಂದು ಹಲವರಿಗೆ ಸ್ಮಾರ್ಟ್‌ಫೋನ್‌ಗಳೆಂದರೆ ಒಂದು ನಿಮಿಷ ಕೂಡಾ ಅದರಿಂದ ದೂರವಿರಲು ಸಾಧ್ಯವಿಲ್ಲ. ಅವು ಅಂತಹ ಸಂಗಾತಿಯಾಗಿ ಪರಿವರ್ತನೆಯಾಗಿದೆ. ಒಂದರನಂತರ ಒಂದರಂತೆ ಬರುವ ಸಂದೇಶಗಳನ್ನು ನೋಡದಿರಲು ನಮ್ಮಿಂದ ಆಗುವುದಿಲ್ಲ. ಜೊತೆಗೂಡಿ ಊಟಮಾಡುವಾಗ ಕೂಡಾ ಫೋನ್ ಮೂಲಕ ಇತರರೊಂದಿಗೆ ಮಾತಾಡುವವರು ಹಲವರಿದ್ದಾರೆ. ಈ ರೀತಿ ನಾವು ನಿಧಾನವಾಗಿ ಈಗ ಡಿಜಿಟಲ್ ತಂತ್ರಜ್ಞಾನದ ಗುಲಾಮರಾಗುತ್ತಿದ್ದೇವೆ.
ಕಾಫಿ:
ಹಬೆಯಾಡುತ್ತಿರುವ ಒಂದು ಕಪ್ ಕಾಫಿಯಿಂದ ದಿನಚರಿಯನ್ನು ಆರಂಭಿಸುವವರು ನಮ್ಮಲ್ಲಿ ಹಲವರು. ಕಾಫಿ ಕುಡಿಯುವುದು ಒಂದು ಚಟ ಅಲ್ಲವೆಂದು ನೀವು ಹೇಳಬಹುದು. ಆದರೆ ಒಂದು ದಿನ ಕುಡಿಯದೆ ಇದ್ದು ನೋಡಿ.. ತಲೆನೋವು, ಆತಂಕ ಮುಂತಾದ ಸಮಸ್ಯೆಗಳು ಕಾಡುವ ಅನುಭವ ನಿಮಗಾಗುತ್ತವೆ.
ಚಾಕ್ಲೆಟ್, ಸಿಹಿ ಆಹಾರವಸ್ತುಗಳು:
ಕೆಲವರಿಗೆ ಚಾಕ್ಲೆಟ್,ಸಿಹಿತಿಂಡಿಗಳು ಹೆಚ್ಚುಪ್ರಿಯ. ತಿಂದರೆ, ತಿನ್ನುತ್ತಲೇ ಇರಬೇಕೆಂದು ಅನಿಸುತ್ತದೆ. ಏನು ಇದರ ರಹಸ್ಯ? ಇದರಲ್ಲಿರುವ ಸಕ್ಕರೆ, ಕೊಬ್ಬು ಇತ್ಯಾದಿ ನಮ್ಮ ಮಿದುಳಿನಲ್ಲಿ ಮಾದಕವಸ್ತುವಿನ ರೀತಿಯಲ್ಲಿ ಕೆಲಸಮಾಡುತ್ತವೆ. ಯಾವಾಗಲಾದರೊಮ್ಮೆ ಕುಡಿಯುವ ಮಿಲ್ಕ್ ಶೇಕ್ ಅಥವಾ ಚಾಕ್ಲೆಟ್ ನಿಮ್ಮಲ್ಲಿ ಚಟವುಂಟುಮಾಡುತ್ತವೆ ಎಂದು ಇದರ ಅರ್ಥವಲ್ಲ. ಆದರೆ ಸಿಹಿ ತಿಂಡಿಗಳನ್ನು ಹೆಚ್ಚು ತಿನ್ನುವ ಅಭ್ಯಾಸ ಇಟ್ಟು ಕೊಳ್ಳುವುದು ದಂತರೋಗ ಮುಂತಾದ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಶಾಪಿಂಗ್:
ಶಾಪಿಂಗ್ ಸಮಯದಲ್ಲಿ ನೀವು ಖರೀದಿಸುತ್ತಿರುವುದೆಲ್ಲವೂ ಅಗತ್ಯವಿರುವ ವಸ್ತುಗಳಾಗಿವೆಯೇ? ಹಲವು ಸಲ ಹಾಗೆ ಇರುವುದಿಲ್ಲ ಎಂಬುದು ನಿಮ್ಮ ಉತ್ತರವಾಗಿದ್ದರೆ, ನಿಮ್ಮ ಶಾಪಿಂಗ್ ಅಭ್ಯಾಸ ಸ್ವಲ್ಪ ಅಪಾಯಕಾರಿಯೇ ಆಗಿದೆ ಎಂದರ್ಥ.
ಅಂದರೆ, ಅಗತ್ಯ ಇರುವ ಮತ್ತು ಇಲ್ಲದ ವಸ್ತುಗಳನ್ನು ಖರೀದಿಸಿ ರಾಶಿ ಹಾಕುವುದರಲ್ಲಿ ನೀವು ಒಂದು ರೀತಿಯ ಸಂತೋಷ ಪಡುತ್ತಿದ್ದೀರಿ. ಈ ಅಭ್ಯಾಸವನ್ನು ಹಠಾತ್ತಾಗಿ ನಿಲ್ಲಿಸಲು ನಿಮ್ಮಿಂದ ಆಗಲಾರದು. ಹಾಗೆಮಾಡಿದರೆ ಏನೋ ಕಳಕೊಂಡವರಂತೆ ಅನುಭವವಾಗುವುದನ್ನು ನೀವೇ ಕಾಣುತ್ತೀರಿ. ಇಷ್ಟು ಮಾತ್ರವಲ್ಲ ಒಂದು ಅಭ್ಯಾಸವಾಗಿ ಶಾಪಿಂಗನ್ನು ಮಾಡಿಬಿಡುವುದು. ಆರ್ಥಿಕ ಮತ್ತು ಸಾಮಾಜಿಕವಾದ ಹಲವು ಸಮಸ್ಯೆಗಳನ್ನು ಸೃಷ್ಟಿಸಬಹುದು.
ಜೂಜಾಟ:
ಜೂಜಾಟದ ಚಟ ಇರುವವರು ಸಮಾಜದಲ್ಲಿದ್ದಾರೆ. ಹಣಇರುವವರು ಇಸ್ಪೀಟ್‌ನಿಂದ ಹಿಡಿದು ಆನ್‌ಲೈನ್ ಜೂಜಾಟ ಆಡುವವರೆಗೂ ವಿಸ್ತಾರವಾಗಿರುವ ಒಂದು ಲೋಕ ಇಂದಿನದು. ಜೂಜಾಟದಲ್ಲಿ ನಿರತರಾಗುವ ಜನರ ದೇಹದಲ್ಲಿ ಉತ್ಪತ್ತಿಯಾಗುವ ಡೊಪಮೈನ್ ಎಂ ಅಮಿನೊ ಆಸಿಡ್ ತಾತ್ಕಾಲಿಕ ಅನಂದದ ಅನುಭೂತಿಯನ್ನುನೀಡುತ್ತದೆ. ಇದು ಮತ್ತೆ ಮತ್ತೆ ಜೂಜಾಡುವಂತೆ ಪ್ರಚೋದಿಸುತ್ತದೆ. ಕೆಲವು ಸಲ ಹಣ, ಉದ್ಯೋಗ,ಕುಟುಂಬ ಜೀವನ ಸಹಿತ ಎಲ್ಲವೂ ನಷ್ಟವಾಗುವ ಅವಸ್ಥೆ ಬಂದು ಬಿಡುತ್ತದೆ.
ವ್ಯಾಯಾಮ:
ವ್ಯಾಯಾಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಾಯಕವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಹಲವು ಕೆಟ್ಟ ಅಭ್ಯಾಸಗಳಿಂದ ನಮಗೆ ಮುಕ್ತಿ ನೀಡಲು ವ್ಯಾಯಾಮದ ಮೂಲಕ ಸಾಧ್ಯವಿದೆ. ಆದರೆ ವ್ಯಾಯಾಮಕ್ಕೆ ಚಟ ಅಂಟಿಸಿಕೊಳ್ಳುವುದು ಎಂಬುದಿದೆ. ಹೌದು. ಮಿತಿಮೀರಿ ವ್ಯಾಯಾಮ ಮಾಡುವುದು ಈ ಕಾಲದ ಒಂದು ಚಟ ಆಗಿ ಬದಲಾಗುತ್ತಿದೆ. ದುರ್ಬಲ ಶರೀರ ಇದ್ದರೂ ಅದನ್ನೆಲ್ಲ ಕಡೆಗಣಿಸಿ ವ್ಯಾಯಾಮ ಮಾಡುವುದರಿಂದ ನಂತರ ದೊಡ್ಡ ಆರೋಗ್ಯ ಸಮಸ್ಯೆಗೆ ದಾರಿಯಾಗಲಿದೆ ಎಂಬುದು ನಮಗೆ ನೆನಪಿರಬೇಕು.
ಸೋಶಿಯಲ್ ಮೀಡಿಯ:
ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಹೆಚ್ಚು ಸಮಯ ಕಳೆಯುವವರು ನೀವಾಗಿದ್ದೀರಾ? ಇಂತಹ ಸಾಮಾಜಿಕಮಾಧ್ಯಮಗಳ ಗುಲಾಮರಾದಂತೆ ನಿಮಗೆ ಅನಿಸುತ್ತಿದೆಯೇ? ಹಾಗಿದ್ದರೆ ಎಚ್ಚರ ವಹಿಸಬೇಕು. ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವವರಲ್ಲಿ ಶೇ.10ರಷ್ಟುಮಂದಿ ಅದಕ್ಕೆ ಗುಲಾಮರಾಗಿ ಬಿಟ್ಟಿದ್ದಾರೆ ಎಂದು ಅಧ್ಯಯನಗಳಿಂದ ತಿಳಿದು ಬಂದಿವೆ. ಮನುಷ್ಯನ ಮೆದುಳಿನಲ್ಲಿ ಕೊಕೈನ್‌ನ ಪರಿಣಾಮ ಆಗುವಂತೆ ಸೋಶಿಯಲ್ ಮೀಡಿಯಾದಲ್ಲಿ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವಾಗ ಆನಂದಾನುಭೂತಿ ಉಂಟಾಗುತ್ತದೆ. ಇದು ಇಂತಹವರು ಮತ್ತೆ ಮತ್ತೆ ಅದರಲ್ಲಿ ತೊಡಗಲು ಕಾರಣವಾಗಿದೆ.
ಲೈಂಗಿಕತೆ:
ಹೆಚ್ಚು ಲೈಂಗಿಕಾಸಕ್ತಿಯಿದ್ದು ಅದರಲ್ಲಿ ಸುಖಾನುಭೂತಿಗಾಗಿ ಆಸಕ್ತರಾದವರು ಅದಕ್ಕಾಗಿ ಪ್ರಯತ್ನಿಸಿ ದೊಡ್ಡದೊಡ್ಡ ಅಪಾಯಗಳನ್ನು ಮೈಮೇಲೆಳೆದುಕೊಳ್ಳುವುದನ್ನು ನಾವು ನೋಡುತ್ತೇವೆ.ಹೈಪರ್ ಸೆಕ್ಸುವಲ್ ಡಿಸಾಡರ್ ಎಂಬ ರೋಗವಾಗಿ ಈ ಆಸಕ್ತಿ ಪರಿವರ್ತನೆಗೊಳ್ಳುವ ಸಾಧ್ಯತೆಯೂ ಇದೆ. ಈ ಅವಸ್ಥೆಯಿಂದಲೂ ನಮ್ಮನ್ನು ಮಾದಕವಸ್ತು, ಜೂಜಾಟಗಳಂತೆ ಗುಲಾಮರಾಗಿಸಲು ಸಾಧ್ಯವಿದೆ.