ಬೈಕ್ ಢಿಕ್ಕಿ: ಸವಾರ ಸಹಿತ ಇಬ್ಬರಿಗೆ ಗಾಯ
Update: 2016-08-07 23:44 IST
ಕಡಬ, ಆ.7: ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ಪಾದಚಾರಿ ಗಾಯಗೊಂಡ ಘಟನೆ ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿ ರವಿವಾರ ನಡೆದಿದೆ. ಬೈಕ್ ಸವಾರ ಸುಂಕದಕಟ್ಟೆ ನಿವಾಸಿ ಹಸೈನಾರ್ ಹಾಗೂ ಪಾದಚಾರಿ ಕಲ್ಲೇರಿ ನಿವಾಸಿ ಯಾಕೂಬ್ ಎಂಬವರ ಕಾಲು ಮುರಿತಕ್ಕೊಳಗಾಗಿದ್ದು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.