×
Ad

ತೋಟಗಾರಿಕಾ ಬೆಳೆ ತರಬೇತಿ ಶಿಬಿರ

Update: 2016-08-07 23:45 IST

ಉಡುಪಿ, ಆ.7: ಜಿಲ್ಲಾ ತೋಟಗಾರಿಕಾ ಇಲಾಖೆ, ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ಸಹಭಾಗಿತ್ವದಲ್ಲ್ಲಿ ತೋಟಗಾರಿಕೆ ಬೆಳೆಗಳ ಕುರಿತು ರೈತರಿಗೆ ತರಬೇತಿ ಶಿಬಿರವು ಕಣಜಾರಿನ ಸೈಂಟ್ ಲೂರ್ಡ್ಸ್ ಚರ್ಚ್ ಹಾಲ್‌ನಲ್ಲಿ ಇತ್ತೀಚೆಗೆ ನಡೆಸಲಾಯಿತು.
ಕಣಜಾರು ಸೈಂಟ್ ಲೂರ್ಡ್ಸ್ ಚರ್ಚ್‌ನ ವಂ.ಅಲೆಕ್ಸಾಂಡರ್ ಮಾತನಾಡಿದರು. ನೀರೆ ಗ್ರಾಪಂ ಅಧ್ಯಕ್ಷ ಸದಾನಂದ ಪ್ರಭು ಕಾರ್ಯಕ್ರಮ ಉದ್ಘಾಟಿಸಿದರು. ತಾಪಂ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ತಾಪಂ ಸದಸ್ಯೆ ವಿದ್ಯಾ ಎಂ. ಸಾಲ್ಯಾನ್ ಉಪಸ್ಥಿತರಿದ್ದರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಶ್ರೀನಿವಾಸ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ.ಎಚ್.ಎಸ್. ಚೈತನ್ಯ ರಶ್ಮಾ ಚಾತ್ರ ಮಾಹಿತಿ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News