×
Ad

ಅಲ್ಪಸಂಖ್ಯಾತರ ಕಲ್ಯಾಣ ಭವನ ಶೀಘ್ರ ಲೋಕಾರ್ಪಣೆ

Update: 2016-08-07 23:47 IST

ಮಂಗಳೂರು, ಆ.7: ಅಲ್ಪಸಂಖ್ಯಾತರಿಗೆ ಸರಕಾರದಿಂದ ಸಿಗುವಂತಹ ಸವಲತ್ತು ಗಳನ್ನು ಪಡೆಯಲು ಫಲಾನುಭವಿಗಳು ನಗರದಲ್ಲಿ ಬೇರೆ ಬೇರೆ ಕಡೆ ಪರದಾಡಬೇಕಾದ ಪರಿಸ್ಥಿತಿಗೆ ಕೊನೆಗೂ ಮುಕ್ತಿ ಸಿಗುವ ದಿನ ಬಂದಿದೆ.
ನಗರದ ಪಾಂಡೇಶ್ವರದಲ್ಲಿ ವಿವಿಧ ಇಲಾಖೆಗಳು ಒಂದೇ ಸೂರಿನಡಿ ಇರಬೇಕೆಂಬ ಉದ್ದೇಶದೊಂದಿಗೆ ನಿರ್ಮಾಣವಾಗುತ್ತಿರುವ ಅಲ್ಪಸಂಖ್ಯಾ ತರ ಕಲ್ಯಾಣ ಭವನದ ಕಾಮಗಾರಿ ಬಹುತೇಕ ಮುಗಿದಿದ್ದು, ಇನ್ನು ಸ್ಪಲ್ಪಮಟ್ಟಿಗೆ ಬಾಕಿಯಿರುವ ಕೆಲಸವನ್ನು ಪೂರ್ಣಗೊಳಿಸಬೇಕಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಭವನ ಉದ್ಘಾಟನೆಗೊಳ್ಳಲಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಪಾಂಡೇಶ್ವರದ ಕೇರಳ ಸಮಾಜ ಶಾಲೆಯ ಬಳಿಯಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಭವನದ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಬಿರುಸಿನಿಂದ ನಡೆದ ಕಾಮಗಾರಿ 9 ತಿಂಗಳಲ್ಲಿಯೇ ಬಹುತೇಕ ಪೂರ್ಣಗೊಂಡಿದ್ದು ಇನ್ನು ಕೆಲವೇ ದಿನಗಳಲ್ಲಿ ಸಣ್ಣ ಪುಟ್ಟ ಕೆಲಸಗಳು ಮುಕ್ತಾಯವಾಗಲಿದೆ. ಈ ಭವನ ನಿರ್ಮಾಣಕ್ಕೆ ಸರಕಾರ 2 ಕೋಟಿ ರೂ. ನೀಡಿದೆ. ಹಿಂದಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅವರ ಮುತುವರ್ಜಿ ಅಲ್ಪಸಂಖ್ಯಾತರ ಕಲ್ಯಾಣ ಭವನ ಶೀಘ್ರದಲ್ಲಿ ನಿರ್ಮಾ ಣವಾಗಲು ಸಾಧ್ಯವಾಗಿದೆ.

4 ಮಹಡಿಯಿರುವ ಅಲ್ಪಸಂಖ್ಯಾತರ ಭವನದ ಪ್ರತಿಯೊಂದು ಮಹಡಿಯು 3,200 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ತಳ ಅಂತಸ್ತಿನಲ್ಲಿ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೊದಲ ಅಂತಸ್ತಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯವರ ಕಚೇರಿ, ಎರಡನೆ ಅಂತಸ್ತಿನಲ್ಲಿ ಜಿಲ್ಲಾ ವಕ್ಫ್ ಕಚೇರಿ ಮತ್ತು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ, ಮೂರನೆ ಅಂತಸ್ತಿನಲ್ಲಿ ಸಭಾಂಗಣವನ್ನು ನಿರ್ಮಿಸಲಾಗಿದೆ. ಅಲ್ಪಸಂಖ್ಯಾತ ಇಲಾಖೆಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ನಡೆಸಲು 3,200 ಚದರ ಅಡಿಯ ಸಭಾಂಗಣ ಅನುಕೂಲವಾಗಲಿದೆ. ಭವನದ ಎಲ್ಲಾ ಕಾಮಗಾರಿಗಳು ಮುಗಿದಿರುವುದರಿಂದ ಇನ್ನು ಪೀಠೋ ಪಕರಣಗಳ ಜೋಡಣೆ ಆಗಬೇಕಾಗಿದೆ. ಇದಾದ ಕೆಲವೇ ದಿನಗಳಲ್ಲಿ ಭವನದ ಉದ್ಘಾಟನೆ ನಡೆಸಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News