×
Ad

ಮಾಯಾ ನಿಂದನೆ ಪ್ರಕರಣ: ದಯಾಶಂಕರ್ ಬಿಡುಗಡೆ

Update: 2016-08-07 23:59 IST

ಮಾವು, ಆ.7: ಬಿಎಸ್ಪಿ ಅಧ್ಯಕ್ಷೆ ಮಾಯಾವತಿಯವರ ಕುರಿತು ನಿಂದನಾತ್ಮಕ ಹೇಳಿಕೆ ನೀಡಿ, ಕಾರಾಗೃಹ ಸೇರಿದ್ದ ಉಚ್ಚಾಟಿತ ಬಿಜೆಪಿ ನಾಯಕ ದಯಾಶಂಕರ್ ಸಿಂಗ್ ಇಂದು ಜೈಲಿಂದ ಬಿಡುಗಡೆಗೊಂಡಿದ್ದಾರೆ. ಅವರಿಗೆ ಸ್ಥಳೀಯ ನ್ಯಾಯಾ ಲಯವೊಂದು ನಿನ್ನೆ ಜಾಮೀನು ಮಂಜೂರು ಮಾಡಿತ್ತು.
ದಿನಗಳ ಕಾಲ ತಲೆಮರೆಸಿಕೊಂಡಿದ್ದ ಸಿಂಗ್‌ರನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಯು ಬಿಹಾರ ಪೊಲೀಸರ ನೆರವಿನೊಂದಿಗೆ ಜು.29ರಂದು ಬಕ್ಸಾರ್‌ನಿಂದ ಬಂಧಿಸಿ ಮಾವುನ ಕಾರಾಗೃಹದಲ್ಲಿರಿಸಿತ್ತು.ಂದು ಬೆಳಗ್ಗೆ ಜೈಲಿನಿಂದ ಬಿಡುಗಡೆಗೊಂಡ ಬಳಿಕ ದಯಾಶಂಕರ್, ದೇವಾಲಯವೊಂದರಲ್ಲಿ ಪ್ರಾರ್ಥನೆ ಸಲ್ಲಿಸಿದ ಮೇಲೆ ಲಕ್ನೊಗೆ ತೆರಳಿದ್ದಾರೆ.

ಜಾಮೀನು ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಬಿಎಸ್ಪಿಯ ನಿಲುವಿನ ಕುರಿತು ಪ್ರಶ್ನಿಸಿದಾಗ, ಬಿಎಸ್ಪಿಯ ಎಲ್ಲ ಸವಾಲುಗಳನ್ನು ತಾನು ಸ್ವೀಕರಿಸುತ್ತೇನೆ. ತಾನು ಹೆಚ್ಚು ಮಾತನಾಡುವುದಿಲ್ಲ. ತಾನು ಮಗಳು, ಕಾಯಿಲೆಯಲ್ಲಿರುವ ತಾಯಿ ಹಾಗೂ ಕುಟುಂಬದ ಸದಸ್ಯರನ್ನು ಭೇಟಿಯಾಗುವುದಕ್ಕಾಗಿ ಲಕ್ನೊಗೆ ಹೋಗುತ್ತಿದ್ದೇನೆಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News