×
Ad

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್’ ದ.ಭಾರತದ ಬ್ರಾಂಡ್ ಅಂಬಾಸಿಡರ್ ಆಗಿ ತಮನ್ನಾ ಭಾಟಿಯಾ

Update: 2016-08-09 00:18 IST

ಮಂಗಳೂರು, ಆ.8: ಪ್ರಸಿದ್ಧ ಚಿನ್ನಾಭರಣ ಮಳಿಗೆ ‘ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್’ನ 156ನೆ ಶೋರೂಂನ್ನು ದಕ್ಷಿಣ ಭಾರತದ ಜನಪ್ರಿಯ ನಟಿ ತಮನ್ನಾ ಭಾಟಿಯಾ ಹಾಗೂ ಶಾಸಕ ಅರಿಕ್ಕಾಪುಡಿ ಗಾಂಧಿ ಸೋಮವಾರ ಹೈದರಾಬಾದ್‌ನ ಚಂದಾನಗರ್‌ನಲ್ಲಿ ಉದ್ಘಾಟಿಸಿದರು.

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ದಕ್ಷಿಣ ಭಾರತದ ನೂತನ ಬ್ರಾಂಡ್ ಅಂಬಾಸಿಡರ್ ಆಗಿರುವ ತಮನ್ನಾ, ಹರಳು(ಜೆಮ್‌ಸ್ಟೋನ್)ಗಳ ನೂತನ ಸಂಗ್ರಹವನ್ನು ಈ ಸಂದರ್ಭ ಅನಾವರಣಗೊಳಿಸಿದರು.

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್’ಗೆ ದಕ್ಷಿಣ ಭಾರತದಲ್ಲಿ ನೂತನ ಬ್ರಾಂಡ್ ಅಂಬಾಸಿಡರ್ ಆಗುವ ಅವಕಾಶ ದೊರೆತಿರುವುದು ನನಗೆ ದೊರೆತ ಗೌರವ’’ ಎಂದು ತಮನ್ನಾ ಈ ಸಂದರ್ಭ ಹೇಳಿದರು.

ತಮನ್ನಾ ಅವರ ಸಹಕಾರದೊಂದಿಗೆ ದಕ್ಷಿಣ ಭಾರತದಲ್ಲಿ ತಮ್ಮ ಉಪಸ್ಥಿತಿ ಹಾಗೂ ವಿಸ್ತರಣಾ ಯೋಜನೆ ಗಳನ್ನು ಬಲಪಡಿಸುವ ಉದ್ದೇಶ ಹೊಂದಿರು ವುದಾಗಿ ಚೇರ್‌ಮನ್ ಎಂ.ಪಿ. ಅಹ್ಮದ್ ತಿಳಿಸಿದ್ದಾರೆ. ಬಾಲಿವುಡ್ ನಟಿ ಕರೀನಾ ಕಪೂರ್ ‘ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್’ನ ಬ್ರಾಂಡ್ ಅಂಬಾಸಿಡರ್ ಆಗಿ ಮುಂದುವರಿಯಲಿದ್ದಾರೆ.

ಸಂಸ್ಥೆಯ ಭಾರತ ದಲ್ಲಿನ ಕಾರ್ಯನಿರ್ವಹಣೆಗಳ ಆಡಳಿತ ನಿರ್ದೇಶಕ ಅಶರ್ ಒ., ಪ್ರಾದೇಶಿಕ ವರಿಷ್ಠ ಸಿರಾಜ್ ಪಿ.ಕೆ., ಆಡಳಿತ ಮಂಡಳಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News