ಆ.8-22: ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡಕ್ಕೆ ಪ್ರವೇಶ ನಿಷೇಧ
Update: 2016-08-09 00:19 IST
ಮಂಗಳೂರು, ಆ.8: ಸ್ವಾತಂತ್ರ ದಿನದ ಭದ್ರತಾ ಕಾರಣಗಳಿಗಾಗಿ ಆ.8ರಿಂದ 22ರವರೆಗೆ ಮಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡಕ್ಕೆ ಸಂದರ್ಶಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟರ್ಮಿನಲ್ ಕಟ್ಟಡಕ್ಕೆ ಸಂದರ್ಶಕರಿಗೆ ಟಿಕೆಟನ್ನು ನೀಡಲಾಗುವುದಿಲ್ಲ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಜೆ.ಟಿ.ರಾಧಾಕೃಷ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.