×
Ad

ಪರಿಸರ ಉಳಿಸಲು ಅರಣ್ಯ ರಕ್ಷಿಸಬೇಕಿದೆ: ಸಚಿವ ರೈ

Update: 2016-08-09 00:20 IST

ವಿಟ್ಲ, ಆ.8: ಮುಂದಿನ ವರ್ಷದಿಂದ ರಾಜ್ಯದ ಪ್ರತೀ ಗ್ರಾಪಂಗಳು ಕನಿಷ್ಠ 5 ಸಾವಿರ ನರ್ಸರಿ ಗಿಡಗಳನ್ನು ಬೆಳೆಸುವಂತೆ ಈಗಾಗಲೇ ಸರಕಾರ ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕೋಟಿ ವೃಕ್ಷ ಆಂದೋಲನಗಳು ನಡೆದಿವೆ. ದ.ಕ. ಜಿಲ್ಲೆಯಲ್ಲಿ ಜನಜಾಗೃತಿ ಮೂಡಿಸುವ ಮೂಲಕ 25 ಲಕ್ಷ ಗಿಡಗಳನ್ನು ಸಿದ್ಧಪಡಿಸಲು ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

 ಬಿ.ಸಿ.ರೋಡ್ ಸಮೀಪದ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಅರಣ್ಯ ಇಲಾಖೆ ಮಂಗಳೂರು ವಿಭಾಗ ಬಂಟ್ವಾಳ ವಲಯ, ತಾಪಂ ಬಂಟ್ವಾಳ, ಪುರಸಭೆ ಬಂಟ್ವಾಳ, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಬಂಟ್ವಾಳ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಕೋಟಿ ವೃಕ್ಷ ಆಂದೋಲನ ವನಮಹೋತ್ಸವ- 2016 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ೀವ ಜಲ, ಜೀವ ವೈವಿಧ್ಯವನ್ನು ಉಳಿಸಿಕೊಂಡು ಪರಿಸರವನ್ನು ರಕ್ಷಿಸಿಕೊಳ್ಳಬೇಕಾಗಿದೆ. ಪ್ರೌಢ ಶಾಲಾ ಮಕ್ಕಳಿಗೆ ಚಿಣ್ಣರ ವನದರ್ಶನ, ಹಸಿರು ಶಾಲೆ, ಹಸಿರು ಗ್ರಾಮ, ಸಿರಿ ಚಂದನವನ, ದೈವೀ ವನ, ಪಡುಮಲೆಯಲ್ಲಿ ದೇಯಿ ಬೈದೆತಿ ಔಷಧಿ ವನ ಯೋಜನೆಗಳ ಮೂಲಕ ವಿವಿಧ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಆಗುತ್ತಿದೆ. ಹೊಸದಾಗಿ ಗಿಡ ನೆಟ್ಟು ಉಳಿಸಿ ಬೆಳೆಸಿ ಪಾಪ ಮುಕ್ತರಾಗಿ ಎಂಬ ಕಾರ್ಯಕ್ರಮದ ಮೂಲಕ ದೊಡ್ಡ ಸಂಖ್ಯೆಯಲ್ಲಿ ಗಿಡ ನೆಡುವ ಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.

 
ಪ್ಲಾಸ್ಟಿಕ್ ನಿಷೇಧ ಮಾಡಿರುವ ಏಕ ಮೇವ ರಾಜ್ಯ ಕರ್ನಾಟಕ, ಜಾನುವಾರುಗಳ ರಕ್ಷಣೆಗಾಗಿ ಪ್ಲಾಸ್ಟಿಕ್ ಉತ್ಪಾದನೆ, ಸಾಗಣೆಯನ್ನು ಸಂಪೂರ್ಣ ನಿಷೇಧಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ರಾಜ್ಯವನ್ನಾಗಿ ಮಾಡಲಾಗಿದೆ ಎಂದರು.ಬುಡಾ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ತುಳು ಕಲಾವಿದ ನವೀನ್ ಡಿ.ಪಡೀಲ್, ವಿಶ್ವನಾಥ ಎಂ. ವೀರಕಂಭ, ಪ್ರಕಾಶ್ ಕುಮಾರ್ ರಾಯಿ, ವಿಶ್ವನಾಥ ಪೂಜಾರಿ, ಸ್ನೇಕ್ ಕಿರಣ್ ವಗ್ಗ, ಸಂದೀಪ್ ಶೆಟ್ಟಿ ಸುರತ್ಕಲ್, ಶೀತಲ್ ಅವರನ್ನು ಸನ್ಮಾನಿಸಲಾಯಿತು. ಸಂಗೀತಗಾರ್ತಿ ಸೌಮ್ಯಾ ಭಟ್‌ಅವರಿಗೆ ಸ್ಮರಣಿಕೆ ನೀಡ ಗೌರವಿಸಲಾಯಿತು. ಪಂ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಎಂ.ಎಸ್.ಮುಹಮ್ಮದ್, ಮಮತಾ ಡಿ.ಎಸ್.ಗಟ್ಟಿ, ಮಂಜುಳಾ ಮಾವೆ, ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಡಿಸಿಸಿ ಉಪಾಧ್ಯಕ್ಷ ಬಿ.ಎಚ್. ಖಾದರ್, ರೋಟರಿ ಕ್ಲಬ್ ಅಧ್ಯಕ್ಷ ರಿತೇಶ್ ಬಾಳಿಗ, ಲಯನ್ಸ್ ಕ್ಲಬ್ ಅಧ್ಯಕ್ಷ ಲಕ್ಷ್ಮಣ ಕುಲಾಲ್, ಗೇರು ನಿಗಮದ ಅಧ್ಯಕ್ಷ ಜಗದೀಶ ಕೊಯಿಲ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ನಾಯ್ಕಾ, ತಹಶೀಲ್ದಾರ್ ಪುರಂದರ ಹೆಗ್ಡೆ ಉಪಸ್ಥಿತರಿದ್ದರು.ಾರ್ಯಕ್ರಮಕ್ಕೂ ಮುನ್ನ ಬಿ.ಸಿ.ರೋಡ್ ತಾಲೂಕು ಕಚೇರಿ ಬಳಿಯಿಂದ ಎನ್‌ಸಿಸಿ ಮತ್ತು ಶಾಲಾ ಮಕ್ಕಳ ಪದಾತಿ ದಳದ ಪಥ ಸಂಚಲನ ವೇದಿಕೆವರೆಗೆ ನಡೆಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ. ಹನುಮಂತಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ವಲಯ ಅರಣ್ಯಾಧಿಕಾರಿ ಎನ್. ಸುಬ್ರಹ್ಮಣ್ಯ ರಾವ್ ಸ್ವಾಗತಿಸಿದರು. ಶಿಕ್ಷಕ ಬಿ. ರಾಮಚಂದ್ರರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News