ಬ್ಯಾರಿ ಧ್ಯೇಯಗೀತೆ ಸಲ್ಲಿಕೆಗೆ ಅವಧಿ ವಿಸ್ತರಣೆ
Update: 2016-08-09 00:21 IST
ಮಂಗಳೂರು, ಆ.8: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಕೂಡಾ ಧ್ಯೇಯಗೀತೆಯನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಆಸಕ್ತ ಕಲಾವಿದರು, ಸಾಹಿತಿಗಳು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಬ್ಯಾರಿ ಭಾಷೆಯಲ್ಲಿ ಸರ್ವ ಮೌಲ್ಯಗಳನ್ನೊಳಗೊಂಡ ಧ್ಯೇಯಗೀತೆಯನ್ನು ರಚಿಸಿ ಬ್ಯಾರಿ ಸಾಹಿತ್ಯ ಅಕಾಡಮಿಗೆ ಸಲ್ಲಿಸಲು ಈ ಹಿಂದೆ ನಿಗದಿಪಡಿಸಿದ್ದ ಅವಧಿಯನ್ನು ಆ.31 ರವರೆಗೆ ವಿಸ್ತರಿಸಲಾಗಿದೆ.ಬ್ಯಾರಿ ಧ್ಯೇಯಗೀತೆಗೆ ಆಯ್ಕೆಯಾದ ಗೀತೆಯ ರಚನಾಕಾರರಿಗೆ ಸೂಕ್ತ ಗೌರವಧನವನ್ನು ನೀಡಲಾಗುವುದು. 2016ರ ಆ.31ರೊಳಗಾಗಿ ರಚನಾಕಾರರು ರಚಿಸಿದ ಬ್ಯಾರಿ ಧ್ಯೇಯಗೀತೆಯನ್ನು ಅಧ್ಯಕ್ಷರು/ರಿಜಿಸ್ಟ್ರಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಪ್ರಿಸಿಡಿಯಂ ಕಮರ್ಷಿಯಲ್ ಕಾಂಪ್ಲೆಕ್ಸ್, ಅತ್ತಾವರ-ನಂದಿಗುಡ್ಡೆ ರಸ್ತೆ, ಮಂಗಳೂರು-575001 ಇಲ್ಲಿಗೆ (ದೂ.ಸಂ.: 0824-2412297, 4260038, ಮೊ.ಸಂ.: 9343563717, 9481149135) ಕಳುಹಿಸುವಂತೆ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ತಿಳಿಸಿದ್ದಾರೆ.