×
Ad

ಉಗ್ರವಾದದ ವಿರುದ್ಧ ಕಾನೂನು ಕ್ರಮಕ್ಕೆ ಸಂಸದ ನಳಿನ್ ಆಗ್ರಹ

Update: 2016-08-09 00:23 IST

ಮಂಗಳೂರು, ಆ.8: ಕೇರಳದಿಂದ ನಾಪತ್ತೆಯಾಗಿ ಐಸಿಸ್ ಉಗ್ರವಾದಿ ಶಿಬಿರಗಳನ್ನು ಸೇರಿರುವವರ ಪತ್ತೆಗೆ ಮತ್ತು ಐಸಿಸ್ ಉಗ್ರವಾದಿಗಳೊಂದಿಗೆ ಕೈಜೋಡಿಸಿರುವವರ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಲೋಕಸಭೆಯ ಮುಂಗಾರು ಅಧಿವೇಶನದ ಶೂನ್ಯವೇಳೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ಸರಕಾರವನ್ನು ಕೋರಿದರು.
ಸದನದಲ್ಲಿ ಮಾತನಾಡಿದ ಸಂಸದರು, ಕೇರಳದಲ್ಲಿ ಇತ್ತೀಚೆನ ದಿನಗಳಲ್ಲಿ ಐಸಿಸ್ ನೆಲೆಯೂರುತ್ತಿರುವುದು ಅತ್ಯಂತ ಕಳವಳಕ್ಕೆ ಕಾರಣವಾಗಿದೆ. ಇದರಿಂದಾಗಿ ಕೇರಳ ಮಾತ್ರವಲ್ಲ ಇಡೀ ದೇಶದಲ್ಲಿಯೇ ಆತಂಕ ಸೃಷ್ಟಿಯಾಗಿದೆ. ಇತ್ತೀಚೆಗೆ ದಿನಪತ್ರಿಕೆಗಳಲ್ಲಿ ವರದಿಯಂತೆ ಸುಮಾರು 20ಕ್ಕೂ ಅಧಿಕ ಯುವಕ ಯುವತಿಯರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ ಎಂದರು.
ಇಸ್ಲಾಮಿಕ್ ಉಗ್ರವಾದವು ಭಾರತದಲ್ಲಿ ಹರಡದಂತೆ ಈ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕೃತ್ಯಕ್ಕೆ ಕಾರಣರಾದವರನ್ನು ಗುರುತಿಸಿ ಸೂಕ್ತ ಕಾನೂನು ಶಿಕ್ಷೆ ನೀಡಬೇಕೆಂದು ಕೇಂದ್ರ ಸರಕಾರ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News