×
Ad

ದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಧಾನಿ ಮೋದಿಯ 5 ಎಂ ಸೂತ್ರ

Update: 2016-08-09 13:07 IST

ಹೊಸದಿಲ್ಲಿ, ಆ.9: ದೇಶದ ಆರ್ಥಿಕ ಅಭಿವೃದ್ಧಿಗೆ ವೇಗವನ್ನು ನೀಡಲು ಪ್ರಧಾನಿ ನರೇಂದ್ರ ಮೋದಿ 5 ಎಂ ಸೂತ್ರಗಳ ಬಗ್ಗೆ ಮಾತನಾಡಿದ್ದಾರೆ. ಲೋಕಸಭೆಯಲ್ಲಿ ಸರಕು ಸೇವಾ ತೆರಿಗೆಯ ಬಗೆಗಿನ ಚರ್ಚೆಗಳಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ‘ಮ್ಯಾನ್, ಮೆಶೀನ್, ಮೆಟೀರಿಯಲ್, ಮನಿ ಹಾಗೂ ಮಿನಿಟ್’ ( ಮಾನವ,ಯಂತ್ರ, ಸಾಧನ, ಹಣ ಹಾಗೂ ಸಮಯ) ಅಗತ್ಯವೆಂದು ಹೇಳಿದ್ದಾರೆ.

‘‘ನಮ್ಮ ದೇಶದ ರಾಜ್ಯಗಳು ಒಂದನ್ನೊಂದು ಅವಲಂಬಿಸಿರುವುದರಿಂದ ಅಭಿವೃದ್ಧಿ ಹೊಂದದ ರಾಜ್ಯಗಳ ಆರ್ಥಿಕ ಅಭಿವೃದ್ಧಿಗೆ ಸರಕು ಹಾಗೂ ಸೇವಾ ತೆರಿಗೆ ಸಹಕಾರಿ’’ಎಂದು ಮೋದಿ ಹೇಳಿದ್ದಾರೆ. ‘‘ಗ್ರಾಹಕನೇ ದೊರೆ’’ಎಂದು ಪುನರುಚ್ಛರಿಸಿದ ಮೋದಿ ‘‘ತೆರಿಗೆ ಭಯೋತ್ಪಾದನೆಯಿಂದ ಗ್ರಾಹಕರಿಗೆ ಸರಕು ಸೇವಾ ತೆರಿಗೆ ಮುಕ್ತಿ ನೀಡುವುದು’’ ಎಂದು ಹೇಳಿದರು. ‘‘ಬಡವರು ಉಪಯೋಗಿಸುವ ವಸ್ತುಗಳು ತೆರಿಗೆಯಿಂದ ಮುಕ್ತವಾಗಿರುವಂತೆ ಜಿಎಸ್‌ಟಿ ಮಸೂದೆ ನೋಡಿಕೊಂಡಿದೆ’’ ಎಂದು ಮೋದಿ ವಿವರಿಸಿದರು.

ಜಿಎಸ್‌ಟಿ ಮಸೂದೆಯನ್ನು ರಾಜ್ಯಸಭೆ ಕಳೆದ ವಾರ ಅಂಗೀಕರಿಸಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News