×
Ad

ಶೋಭಾ ಡೇ ಗೆ ದುಬಾರಿಯಾದ ಭಾರತೀಯ ಒಲಿಂಪಿಯನ್ ಗಳ ಕುರಿತ ಕೀಳು ಅಭಿರುಚಿಯ ಹೇಳಿಕೆ

Update: 2016-08-09 13:19 IST

ಹೊಸದಿಲ್ಲಿ, ಆ.9 : ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತೀಯ ಅಥ್ಲೀಟ್‌ಗಳನ್ನು ಅಪಹಾಸ್ಯ ಮಾಡಿದ ಖ್ಯಾತ ಲೇಖಕಿ ಶೋಭಾ ಡೇ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಮಂದಿಯಿಂದ ಛೀಮಾರಿಗೊಳಗಾಗಿದ್ದಾರೆ.

ಅಂತಿಮ ಕ್ಷಣದಲ್ಲಿ ಪದಕ ಪಡೆಯಲು ವಿಫಲರಾದ ಕೆಲ ಭಾರತೀಯ ಅಥ್ಲೀಟ್‌ಗಳನ್ನು ಟೀಕಿಸಿ ಅವರೆಲ್ಲಾ ರಿಯೋಗೆ ಸೆಲ್ಫೀ ತೆಗೆಯಲು ಹೋಗಿದ್ದಾರೆಂದು ಹೇಳಿದ ಶೋಭಾರತ್ತ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ದಾಳಿ ನಡೆಸಲಾಗಿದೆ. ಗೋಲ್ ಆಫ್ ಟೀಮ್ ಇಂಡಿಯಾ ಎಟ್ ದಿ ಒಲಿಂಪಿಕ್ಸ್: ರಿಯೋ ಜಾವೋ. ಸೆಲ್ಫೀಸ್ ಲೋ. ಖಾಲೀ ಹಾಥ್ ವಾಪಸ್ ಆವೋ. ವಾಟ್ ಎ ವೇಸ್ಟ್ ಆಫ್ ಮನಿ ಆ್ಯಂಡ್ ಅಪೊರ್ಚುನಿಟಿ, ಎಂದು ಶೋಭಾ ಸೋಮವಾರ ಟ್ವೀಟ್ ಮಾಡಿದ್ದರು.

ಇದು ವೈರಲ್ ಆಗಿದ್ದೇ ತಡ ಹಲವು ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾಳುಗಳು ಶೋಭಾ ವಿರುದ್ಧ ಕೆಂಡ ಕಾರಿದ್ದರು.

ಇಲ್ಲಿವೆ ಆಕ್ರೋಶಗೊಂಡಿರುವ ಕ್ರೀಡಾಭಿಮಾನಿಗಳ ಕೆಲವೊಂದು ಟ್ವೀಟ್‌ಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News