ಕಾಶ್ಮೀರ ಕುರಿತು ಚರ್ಚೆ ಆರಂಭಿಸಬೇಕು: ಕೇಂದ್ರವನ್ನು ವಿನಂತಿಸಿದ ಮೆಹಬೂಬ ಮುಫ್ತಿ

Update: 2016-08-09 09:32 GMT

 ಕಾಶ್ಮೀರ,ಆ.9: ಸಂಘರ್ಷಗ್ರಸ್ತ ಕಾಶ್ಮೀರದ ಜನಜೀವನ ಅಸ್ತವ್ಯಸ್ತ ಸ್ಥಿತಿಯಲ್ಲಿ ಮುಂದುವರಿಯುತ್ತಿದ್ದು, ಸರಕಾರ, ಜನರಲ್ಲಿ ವಿಶ್ವಾಸ ಹುಟ್ಟುಹಾಕುವ ಕೆಲಸಕ್ಕೆ ಮುಂದಾಗಬೇಕೆಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ದಿಲ್ಲಿಯಲ್ಲಿ ಗ್ರಹಸಚಿವ ರಾಜ್‌ನಾಥ್ ಸಿಂಗ್‌ರನ್ನು ಭೇಟಿಯಾಗಿ ಅವರು ಈಕುರಿತು ಮನವಿ ಸಲ್ಲಿಸಿದ್ದಾರೆ ಇದೇವೇಳೆ ಸಂಸತ್ತಿನಲ್ಲಿ ವಿವಿಧ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರಮೋದಿ ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿವೆ ಎಂದು ತಿಳಿದು ಬಂದಿದೆ.

 ಕೇಂದ್ರ ಗ್ರಹಸಚಿವ ರಾಜ್‌ನಾಥ್ ಸಿಂಗ್ ಕಾಶ್ಮೀರಕ್ಕೆ ಭೇಟಿ ನೀಡಿ ಮರಳಿ ಹಲವು ದಿವಸಗಳಾದವು. ಅದರೂ ಸಮಸ್ಯೆಪರಿಹಾರಕ್ಕಾಗಿ ಚರ್ಚೆಗೆ ಮುಂದಾಗಿಲ್ಲ ಎಂದು ಟೀಕೆಗಳು ಕೇಳಿಸಿಕೊಂಡಿವೆ. ಇಷ್ಟು ದೀರ್ಘಾವಧಿ ಕರ್ಫ್ಯೂವನ್ನು ಸ್ವತಂತ್ರ ಭಾರತದಲ್ಲಿ ಯಾವತ್ತೂ ಎಲ್ಲಿಯೂ ವಿಧಿಸಲಾಗಿಲ್ಲ. ನಿನ್ನೆಯೂ ಸೇನೆಯ ಗುಂಡಿಗೆ ಒಬ್ಬ ಆಹುತಿಆಗಿದ್ದಾನೆ. ಒಟ್ಟು 55 ಮಂದಿ ಹತ್ಯೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.

       ಸಂಘರ್ಷಾವಸ್ಥೆ ಮುಂದುವರಿಯುತ್ತಿದ್ದರೂ ಪ್ರಧಾನಿ ನರೇಂದ್ರಮೋದಿ ಮೌನಕ್ಕೆ ಶರಣಾಗಿದ್ದಾರೆ. ಜನರ ಬಳಿಗೆ ಸರ್ವಪಕ್ಷಗಳ ತಂಡವನ್ನು ಕಳುಹಿಸಿ ಚರ್ಚೆ ನಡೆಸಬೇಕು. ಆಚರ್ಚೆಗೆ ಸ್ವತಂತ್ರ ಸ್ಪರ್ಶವನ್ನು ನೀಡಲು ಪ್ರಯತ್ನಿಸಬೇಕು ಎಂದು ಪ್ರತಿಪಕ್ಷಗಳು ಬೇಡಿಕೆಯನ್ನು ಇಟ್ಟಿವೆ. ಸೋಮವಾರ ಪಾರ್ಲಿಮೆಂಟಿನಲ್ಲಿ ಸಿಪಿಐ, ಸಮಾಜವಾದಿಪಕ್ಷ, ಸಿಪಿಐಎಂ, ಕಾಂಗ್ರೆಸ್ ಪಕ್ಷಗಳು ಈ ಬೇಡಿಕೆಯನ್ನು ಮುಂದಿಟ್ಟಿವೆ. ಗ್ರಹಸಚಿವರನ್ನು ಭೇಟಿಯಾದ ಬಳಿಕ ಮಾತಾಡಿದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ" ಪ್ರಧಾನಿ ಮೋದಿ ಈಗಿನ ಪರಿಸ್ಥಿತಿಯನ್ನು ಜಮ್ಮು-ಕಾಶ್ಮೀರದ ಜನರ ಸಮಸ್ಯೆಯ ಕುರಿತು ಮಾತುಕತೆ ಆರಂಭಿಸುವ ಸಂದರ್ಭವಾಗಿ ಬಳಸಿಕೊಳ್ಳಲಿದ್ದಾರೆ" ಎಂದು ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. "ಜನರ ಮನಸ್ಸಿನಲ್ಲಿ ಸ್ಥಾನ ಗಳಿಸಲು ಇಂತಹದೊಂದು ಪ್ರಯತ್ನ ಅಗತ್ಯ, ವಾಜಪೇಯಿ ಸರಕಾರದ ಕಾಲದಲ್ಲಿ ಹಾಗೆ ನಡೆದಿತ್ತು" ಎಂದು ಅವರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News