ಆಸಾರಾಂಗೆ ಮತ್ತೊಂದು ಹಿನ್ನಡೆ: ತಿರಸ್ಕೃತವಾದ 9ನೆ ಜಾಮೀನು ಅರ್ಜಿ

Update: 2016-08-09 10:37 GMT

 ಜೋಧಪುರ,ಆ.9: ರಾಜಸ್ಥಾನದ ಉಚ್ಚನ್ಯಾಯಾಲಯ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆಸಾರಾಂ ಬಾಪುರ ಜಾಮೀನು ಅರ್ಜಿಯನ್ನು ಮತ್ತೊಮ್ಮೆ ತಿರಸ್ಕರಿಸಿದೆ. ನ್ಯಾಯಾಧೀಶರಾದ ನಿರ್ಮಲ್‌ಜೀತ್ ಇಂದು ಈ ತೀರ್ಪನ್ನು ನೀಡಿದ್ದು ಎರಡು ದಿವಸಗಳ ಹಿಂದೆ ಪ್ರಕರಣದ ಆಲಿಕೆ ನಡೆಸಿ ತೀರ್ಪಿಗಾಗಿ ಇಂದಿಗೆ ಕಾದಿರಿಸಿದ್ದರು. ಆಸಾರಾಂ ಕೆಳ ಕೋರ್ಟ್‌ನಿಂದ ಉಚ್ಚತಮ ನ್ಯಾಯಾಲದವರೆಗೆ ಸಲ್ಲಿಸಿದ ಒಟ್ಟು ಒಂಬತ್ತು ಜಾಮೀನು ಅರ್ಜಿಗಳು ಈವರೆಗೆ ವಜಾಗೊಂಡಂತಾಗಿದೆ ಎಂದು ವರದಿಯಾಗಿದೆ.

 ಪ್ರಕರಣ ಅಂತಿಮ ಹಂತದಲ್ಲಿ ನಡೆಯುತ್ತಿದ್ದರಿಂದ ಇಂತಹ ಆರೋಪಗಳಿಗೆ ಜಾಮೀನು ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿ ಹೇಳಿದೆ.2003ರ ಆಗಸ್ಟ್ 15ರಂದು ಜೋಧಪುರದ ಮಣಾಯಿ ಆಶ್ರಮದಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಆಸಾರಾಂರನ್ನು ಅದೇ ವರ್ಷ ಆಗಸ್ಟ್ 31ಕ್ಕೆ ಇಂದೋರ್‌ನಲ್ಲಿ ಬಂಧಿಸಲಾಗಿತ್ತು ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News