ಅಪರಿಚಿತ ಮಹಿಳೆಯನ್ನು 20,000 ರೂ.ಗೆ ಮಾರಿದ ಸಮಾಜವಾದಿ ಪಕ್ಷದ ನಾಯಕ!

Update: 2016-08-09 11:25 GMT

 ಬಾರಬಂಕಿ,ಆ.9: ಸಮಾಜವಾದಿ ಪಕ್ಷದ ಸ್ಥಳೀಯ ನಾಯಕನೊಬ್ಬ ಅಪರಿಚಿತ ಮಹಿಳೆ ಮತ್ತು ಆಕೆಯ ನವಜಾತ ಶಿಶುವನ್ನು20 ಸಾವಿರ ರೂಪಾಯಿಗೆ ಗ್ರಾಮದ ಇನ್ನೊಬ್ಬ ವ್ಯಕ್ತಿಗೆ ಮಾರಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಾರಬಂಕಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಸ್ಥಳೀಯ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷನೂ ಆದ ರಾಮ್‌ಕುಮಾರ್ ಯಾದವ್ ಎಂಬಾತ ಅಪರಿಚಿತ ಮಹಿಳೆಯನ್ನು ಮಾರಿದ ವ್ಯಕ್ತಿಯೆಂದು ಗುರುತಿಸಲಾಗಿದ್ದು ಈ ಪ್ರಕರಣದಲ್ಲಿ ಶಾಮೀಲಾದ ಐದು ಮಂದಿ ಆರೋಪಿಗಳಲ್ಲಿ ಮೂವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ ಹಾಗೂ ಮಹಿಳೆ ಮತ್ತು ಶಿಶುವನ್ನು ರಾಜ್ಯಸರಕಾರದ ಸ್ವಾಧಾರ್ ಗೃಹಕ್ಕೆ ಕಳುಹಿಸಿದ್ದಾರೆಂದು ವರದಿಯಾಗಿದೆ. ಬಾರಬಂಕಿಯ ಮಂಗಾಪುರದಲ್ಲಿ ನಿನ್ನೆ ಮಹಿಳೆಯೊಬ್ಬಳು ಪ್ರಜ್ಞಾ ಹೀನ ಸ್ಥಿತಿಯಲ್ಲಿ ಬದ್ದಿದ್ದಾಳೆ ಎಂದು ಸ್ಥಳೀಯಪೊಲೀಸರಿಗೆ ದೂರು ಬಂದಿತ್ತು. ಸ್ಥಳಕ್ಕೆ ತೆರಳಿದ ಪೊಲೀಸರು ಆಕೆಯನ್ನು ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಮಹಿಳೆ ತನ್ನ ದಯನೀಯ ಸ್ಥಿತಿಯನ್ನು ಪೊಲೀಸರಿಗೆ ವಿವರಿಸಿದ್ದರೂ ಅವಳು ಮಾತಾಡುವ ಭಾಷೆ ಅರ್ಥವಾಗುತ್ತಿರಲಿಲ್ಲ. ಪೊಲೀಸರು ಗ್ರಾಮಸ್ಥರನ್ನು ವಿಚಾರಿಸಿದಾಗ ತಪ್ಪಿತಸ್ಥ ಕೃಷ್ಣಕುಮಾರ ಎಂಬಾತನನ್ನು ಅವರು ತೋರಿಸಿಕೊಟ್ಟಿದ್ದರು. ಆತನನ್ನು ಬಂಧಿಸಿ ವಿಚಾರಿಸಿದಾಗ ಈ ಮಹಿಳೆಯನ್ನು ಸರೀಫಾ ಬಾದ್ ನಿವಾಸಿ ಮಾಜಿಪ್ರಧಾನ ಹಾಗೂ ಸ್ಥಳೀಯ ಸಮಾಜವಾದಿ ಪಕ್ಷದ ನಾಯಕ ರಾಮ್‌ಕುಮಾರ್ ಯಾದವ್‌ನಿಂದ ಇಪ್ಪತ್ತು ಸಾವಿರ ರೂಪಾಯಿಗೆ ಮಹಿಳೆಯನ್ನುಖರೀದಿಸಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಕೃಷ್ಣಕುಮಾರನ ಹೇಳಿಕೆಯಂತೆ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಐದು ಮಂದಿಯ ವಿರುದ್ಧ ಕೇಸು ದಾಖಲಿಸಿದ್ದಾರೆ. ರಾಮ್‌ಕುಮಾರ್ ಯಾದವ್ ಸಹಿತ ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News