ಜಿಎಸ್‌ಟಿ ಜಾರಿಯ ಗಡುವು ಸವಾಲಿನದು: ರಘುರಾಮ ರಾಜನ್

Update: 2016-08-09 13:55 GMT

ಹೊಸದಿಲ್ಲಿ, ಅ.9: ಮುಂದಿನ 2017ರ ಎ.1ರಿಂದ ಜಿಎಸ್‌ಟಿಯನ್ನು ಜಾರಿಗೊಳಿಸುವುದು ಸವಾಲಿನ ಕೆಲಸವಾಗಲಿದೆ. ಆದರೆ, ಹೊಸ ಪರೋಕ್ಷ ತೆರಿಗೆ ಕಾಯ್ದೆಯು ಕೊನೆಗೂ ವ್ಯಾಪಾರ ಹಾಗೂ ಹೂಡಿಕೆಯನ್ನು ಉತ್ತೇಜಿಸಲಿವೆಯೆಂದು ರಿಸರ್ವ್ ಬ್ಯಾಂಕ್ ಇಂದು ಹೇಳಿದೆ.
ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಯಿಂದ ಬೆಲೆಯೇರಿಕೆ ಉಂಟಾಗಬಹುದೆಂಬ ಭಯವನ್ನು ದೂರ ಮಾಡಿರುವ ಆರ್‌ಬಿಐ ಗವರ್ನರ್ ರಘುರಾಮ ರಾಜನ್, ಜಿಎಸ್‌ಟಿಯ ದರವನ್ನು ನಿರ್ಧರಿಸಿದ ಬಳಿಕವಷ್ಟೇ ಅದರ ಪರಿಣಾಮವನ್ನು ಅಂದಾಜಿಸಬಹುದು. ಅನೇಕ ದೇಶಗಳಲ್ಲಿ ಕಂಡಿರುವಂತೆ ಹಣದುಬ್ಬರವು ಅಲ್ಪಾಯುಷಿಯಾಗಬಹುದೆಂದು ತಿಳಿಸಿದ್ದಾರೆ.
ಗಡುವಿನೊಳಗೆ ಜಿಎಸ್‌ಟಿ ಜಾರಿ ಸವಾಲಾಗಬಹುದು. ಹೆಚ್ಚಿನ ಆರ್ಥಿಕತೆಯಾದ್ಯಂತದ ಹೂಡಿಕೆಗಳಿಗೆ ಅದು ಲಾಭವನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ. ಅಲ್ಲದೆ, ಮಧ್ಯಮಾವಧಿಯಲ್ಲಿ ಅದು ಸರಕಾರಿ ಹಣಕಾಸು ಸ್ಥಿತಿಯನ್ನೂ ಬಲಪಡಿಸಲಿದೆಯೆಂದು ನಾಲ್ಕನೆ ದ್ವೈಮಾಸಿಕ ಹಣಕಾಸು ನೀತಿ ಹೇಳಿಕೆಯಲ್ಲಿ ಅವರು ಭರವಸೆ ನೀಡಿದ್ದಾರೆ.
ಇದು ವ್ಯಾಪಾರ ಭಾವನೆ ಹಾಗೂ ಕಡೆಗೆ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲಿದೆಯೆಂದು ಸೆ.4ರಂದು ನಿವೃತ್ತರಾಗಲಿರುವ ರಘುರಾಮ ರಾಜನ್ ತನ್ನ ಕೊನೆಯ ಹಣಕಾಸು ನೀತಿಯನ್ನು ಘೋಷಿಸಿದ ಬಳಿಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News