×
Ad

ಮಲೆಯಾಳಂ ಸಿನೆಮಾ ನಿರ್ದೇಶಕ ಶಶಿಶಂಕರ್ ನಿಧನ

Update: 2016-08-10 14:34 IST

ಕೋಟ್ಟಯಂ, ಆಗಸ್ಟ್ 10: ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಶಶಿಶಂಕರ್ ನಿಧನರಾಗಿದ್ದಾರೆ. ಮನೆಯಲ್ಲಿ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರೂ ಬೆಳಗ್ಗೆ ಒಂಬತ್ತು ಗಂಟೆಗೆ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಕೊಲಂಚೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಅವರ ಪಾರ್ಥಿವ ಶರೀರವಿದೆ.

ನಾರಾಯಂ, ಕುಂಞಿಕುನ್ನನ್. ಮಂತ್ರಮೋದಿರಂ, ಮಿಸ್ಟರ್ ಬಟ್ಲರ್, ಸರ್ಕಾರ್ ದಾದ ಮುಂತಾದ ಹತ್ತು ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ಪೇರಯಗನ್, ಪಗಡಾಯ್ ಎಂಬ ತಮಿಳು ಸಿನೆಮಾಗಳನ್ನು ಅವರು ನಿರ್ದೇಶಿಸಿದ್ದಾರೆ. ಸಾಮಾಜಿಕ ಹಿನ್ನೆಲೆಯ ಚಿತ್ರವಾದ ನಾರಾಯಂಗಾಗಿ ಅವರಿಗೆ 1993ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News