ಬ್ಯಾರಿ ಅಕಾಡೆಮಿಯಿಂದ ‘ದ್ವೈವಾರ್ಷಿಕ ಕಾರ್ಯಕ್ರಮಗಳ ಅವಲೋಕನ’
Update: 2016-08-10 16:49 IST
ಮಂಗಳೂರು,ಆ.10: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಆ. 13ರಂದು ದ್ವೈವಾರ್ಷಿಕ ಕಾರ್ಯಕ್ರಮಗಳ ಅವಲೋಕನವನ್ನು ಆಯೋಜಿಸಿದೆ.
ಅತ್ತಾವರದ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಚೇರಿಯಲ್ಲಿ ಸಂಜೆ 3 ಗಂಟೆಗೆ ಕಾರ್ಯಕ್ರಮವನ್ನು ಸಚಿವ ಬಿ. ರಮಾನಾಥ ರೈಯವರು ಕಾರ್ಯಕ್ರಮಗಳ ಡಿವಿಡಿ ಬಿಡುಗಡೆಯೊಂದಿಗೆ ನೆರವೇರಿಸಲಿದ್ದಾರೆ. ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ. ಮೊಯ್ದೀನ್ ಬೆಲ್ಕಿರಿ ವಿಶೇಷಾಂಕ ಬಿಡುಗಡೆ ಮಾಡಲಿದ್ದಾರೆ. ಬ್ಯಾರಿ ಕನ್ನಡ ಇಂಗ್ಲಿಂಷ್ ನಿಘಂಟು ಸಂಪಾದಕ ಬಿ.ಎಂ. ಇಚ್ಲಂಗೋಡುರವರು ಅಕಾಡೆಮಿಗಳ ಕಾರ್ಯಕ್ರಮಗಳ ಬಗ್ಗೆ ಅನಿಸಿಕೆ ವ್ಯಕ್ತಪಡಿಸಲಿರುವರು.
ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರಹೀಂ ಟೀಕೆ ಮತ್ತು ಎನ್‌ಎಂಪಿಟಿ ನಿವೃತ್ತ ಉಪನಿರ್ದೇಶಕ ಖಾಲಿದ್ ತಣ್ಣೀರು ಬಾವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.