×
Ad

ಪುತ್ತೂರು: ಕಾವು -ಮಾಡ್ನೂರು ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ

Update: 2016-08-10 18:55 IST

ಪುತ್ತೂರು, ಆ.10: ಚುನಾವಣೆಯ ಸಂದರ್ಭದಲ್ಲಿ ಕಾವು- ಮಾಡ್ನೂರು ದಲಿತ ಕಾಲನಿಯ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿದ್ದೇನೆ. ಕಾಲನಿಯಲ್ಲಿ ನೂತನ ಅಂಬೇಡ್ಕರ್ ಭವನವನ್ನು ನಿರ್ಮಿಸಲು 10 ಲಕ್ಷ ರೂ. ಅನುದಾನವನ್ನು ಬಿಗಡುಗಡೆ ಮಾಡಲಾಗಿದೆ, ಮುಂದಿನ ವರ್ಷದಲ್ಲಿ ಅಂಬೇಡ್ಕರ್ ಭವನದ ಕಾರ್ಯ ಪೂರ್ಣಗೊಳ್ಳಲಿದೆ. ಚುನಾವಣೆಯ ಸಂದಭರ್ದಲ್ಲಿ ನೀಡಿರುವ ಭರವಸೆ ಈಡೇರಿಸಿದ ತೃಪ್ತಿಯಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದ್ದಾರೆ.

ಅವರು ಬುಧವಾರ ಅರಿಯಡ್ಕ ಮಾಡ್ನೂರು ಗ್ರಾಮದ ದಲಿತ ಕಾಲನಿಯಲ್ಲಿ ನೂತನ ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಅರಿಯಡ್ಕ ಗ್ರಾಮದಲ್ಲಿ ಇನ್ನೂ ಅನೇಕ ಕಾಮಗಾರಿಗಳು ನಡೆಯಬೇಕಿದ್ದು ಇದಕ್ಕಾಗಿ ಹಂತ ಹಂತದಲ್ಲಿ ಅನುದಾನವನ್ನು ನೀಡುವುದಾಗಿ ಶಾಸಕಿ ಭರವಸೆ ನೀಡಿದರು. ಕಾಲನಿಯಲ್ಲಿ ಭವನ ನಿರ್ಮಾಣವಾಗಬೇಕಂಬುದು ಅನೇಕ ವರ್ಷಗಳ ಬೇಡಿಕೆಯಾಗಿತ್ತು ಅದನ್ನು ಈಡೇರಿಸಿದ ತೃಪ್ತಿ ನನಗಿದೆ ಎಂದು ಹೇಳಿದರು.

ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ, ಗ್ರಾಪಂ ಸದಸ್ಯ ದಿವ್ಯನಾಥ ಶೆಟ್ಟಿ, ಕಾವು ಬುಶ್ರಾ ಶಿಕ್ಷಣ ಸಂಸ್ಥೆಗಳ ಸಂಚಾಲಕ ಅಬ್ದುಲ್ ಅಝೀಝ್ ಬುಶ್ರಾ, ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ರೈ ಅಂಕೊತ್ತಿಮಾರ್, ಸಾರ್ಥಕ್ ರೈ ಅರಿಯಡ್ಕ, ಉಪತಹಶೀಲ್ದಾರ್ ಶ್ರೀಧರ್, ಕಂದಾಯ ನಿರೀಕ್ಷಕ ದಯಾನಂದ ಹೆಗ್ಡೆ, ಶಿವರಾಮ ಮಣಿಯಾಣಿ ಪಾಪೆಮಜಲು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News