ಪಾಲಿಟೆಕ್ನಿಕ್ ಪೂರ್ಣ ಕ್ಯಾರಿಓವರ್ ನೀಡಲು ಒತ್ತಾಯಿಸಿ ಧರಣಿ
ಮಂಗಳೂರು, ಆ.10: ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನ ಸಿಲೆಬಸ್ ಬದಲಾವಣೆಗೊಂಡಿದ್ದರೂ ಪೂರ್ಣ ಕ್ಯಾರಿಓವರ್ ನೀಡಲು ಡಿಟಿಇ ಬೋರ್ಡ್ ನಿರಾಕರಣೆ ಮಾಡುತ್ತಿರುವುದನ್ನು ವಿರೋಧಿಸಿ ಇಂದು ಪಾಲಿಟೆಕ್ನಿಕ್ ಸರ್ವಕಾಲೇಜು ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.
ಧರಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಮುಖಂಡ ದಿನಕರ ಶೆಟ್ಟಿ, ಜನರಿಗೆ ಭಾಗ್ಯಗಳನ್ನು ನೀಡುವ ಸರಕಾರ ಮೊದಲಿಗೆ ವಿದ್ಯಾರ್ಥಿಗಳಿಗೆ ವಿದ್ಯಾಭಾಗ್ಯ ನೀಡಲಿ. ಡಿಟಿಇ ಬೋರ್ಡ್ ವಿದ್ಯಾರ್ಥಿಗಳನ್ನು ಬೀದಿಗೆ ತಂದು ನಿಲ್ಲಿಸುವ ಕಾರ್ಯ ಮಾಡುತ್ತಿದೆ. ಸರಕಾರದ ಗಮನಕ್ಕೆ ತಾರದೆ ಡಿಟಿಇ ಬೋರ್ಡ್ ವಿದ್ಯಾರ್ಥಿಗಳಿಗೆ ಸಂಕಷ್ಟ ನೀಡುತ್ತಿದೆ ಎಂದು ಆರೋಪಿಸಿದರು.
ಧರಣಿಯ ನೇತೃತ್ವವನ್ನು ವಿದ್ಯಾರ್ಥಿ ಮುಖಂಡರುಗಳಾದ ವಿನಯ್, ಶಿವಪ್ರಸಾದ್, ಸುದರ್ಶನ್, ಲಿಖಿತ್, ದೀಕ್ಷಿತ್, ಮನಿಷ್, ಸಿದ್ದಾರ್ಥ್, ವ್ನಿೇಶ್, ಅಕ್ಷಿತ್, ಸುಧೀರ್ ಕುಲಾಲ್, ಸಂದೀಪ್ ಮೊದಲಾದವರು ವಹಿಸಿದ್ದರು.