×
Ad

ಮಹಿಳೆಯರು ಸಹಕಾರಿ ಕ್ಷೇತ್ರದಲ್ಲಿ ತೊಡಗಿದರೆ ಸಮಾಜಕ್ಕೆ ಶಕ್ತಿ: ಚನಿಲ ತಿಮ್ಮಪ್ಪ ಶೆಟ್ಟಿ

Update: 2016-08-10 19:30 IST

ಪುತ್ತೂರು, ಆ.10: ತನ್ನ ಕುಟುಂಬದ ಜೊತೆ ಸಮಾಜವನ್ನು ಶ್ರೇಷ್ಠವಾಗಿ ನಿರ್ವಹಿಸುವ ಶಕ್ತಿ ಮಹಿಳೆಯರಿಗಿದ್ದು, ಮಹಿಳೆಯರು ಸಹಕಾರಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಕ್ಯಾಂಪ್ಕೊ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ ಹೇಳಿದ್ದಾರೆ.

ಅವರು ಪುತ್ತೂರಿನ ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ದ.ಕ.ಜಿಲ್ಲಾ ಸಹಕಾರ ಭಾರತಿ ಮತ್ತು ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಆಶ್ರಯದಲ್ಲಿ ನಡೆದ ಸಹಕಾರಿ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಸಹಕಾರಿ ಸಂಸ್ಥೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಜನಸಾಮಾನ್ಯರಿಗೆ ಸರಕಾರದ ಸವಲತ್ತುಗಳನ್ನು ಮುಟ್ಟಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಸರಕಾರವು ಮಹಿಳೆಯರಿಗೆ ಅನೇಕ ಪ್ರೋತ್ಸಾಹ ಧನ ನೀಡುತ್ತಿದೆ ಎಂದು ಅವರು ತಿಳಿಸಿದರು.

 ದ.ಕ.ಜಿಲ್ಲಾ ಸಹಕಾರ ಭಾರತಿ ಅಧ್ಯಕ್ಷ ಉದಯ ರೈ ಮಾದೋಡಿ ಮಾತನಾಡಿ, ಮಹಿಳೆಯರು ಸಹಕಾರಿ ಕ್ಷೇತ್ರದಲ್ಲಿ ಸರಿಯಾದ ರೀತಿಯಲ್ಲಿ ತೊಡಗಿಸಿಕೊಂಡರೆ ದೇಶದ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದರು. ದೇಶ ಪ್ರೇಮಕ್ಕೆ ಒತ್ತು ನೀಡಿದಲ್ಲಿ ಸಹಕಾರಿ ಕ್ಷೇತ್ರ ಗಟ್ಟಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕ್ಯಾಂಪ್ಕೊ ನಿರ್ದೇಶಕ ಕೊಂಕೋಡಿ ಪದ್ಮನಾಭ, ಸಹಕಾರ ಕ್ಷೇತ್ರದ ನಿವೃತ್ತ ಡಿ.ಆರ್. ಬಸವಪ್ಪ ಅತಿಥಿಗಳಾಗಿ ಭಾಗವಹಿಸಿದ್ದರು.ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕಿ ಮೋಹಿನಿ ದಿವಾಕರ್, ಶಶಿಕಲಾ ಸೋಮನಾಥ್, ಉಷಾ ನಾಯಕ್, ಮೋಹಿನಿ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷೆ ಗೌರಿ ಎಚ್. ಸ್ವಾಗತಿಸಿದರು. ನಿರ್ದೇಶಕಿ ಉಮಾ ಡಿ.ಪ್ರಸನ್ನ ವಂದಿಸಿದರು. ಸಹಕಾರ ತರಬೇತುದಾರ ಮೂಡಬಿದ್ರೆಯ ಬಿಂದು ನಾಯರ್ ಸಹಕಾರ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಕುರಿತು, ಶಿವಮೊಗ್ಗದ ಸನ್ಮತಿ ಪ್ರತಿಷ್ಠಾನದ ಮಹಾದೇವಪ್ಪಸಹಕಾರ ಕಾಯ್ದೆ ಕುರಿತು ಗೋಷ್ಠಿ ನಡೆಸಿಕೊಟ್ಟರು.

ಸಹಕಾರ ಭಾರತಿಯ ಪಾಂಡುರಂಗ ಹೆಗ್ಡೆ, ಚಂದ್ರಶೇಖರ್ ಸಹಕರಿಸಿದರು. ಸುಳ್ಯ, ಪುತ್ತೂರು, ಬೆಳ್ತಗಂಡಿ ಮತು ್ತಬಂಟ್ವಾಳ ತಾಲೂಕಿನ ಸಹಕಾರ ಭಾರತಿ ಮತ್ತು ಹಾಲಿನ ಸೊಸೈಟಿಯ ನಿರ್ದೇಶಕರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News