×
Ad

ಅಫ್ಘಾನ್‌ನ ಹೆಲ್ಮಂಡ್‌ನಲ್ಲಿ ಭೀಕರ ಕಾಳಗ; ಸಾವಿರಾರು ನಾಗರಿಕರ ಪಲಾಯನ

Update: 2016-08-10 22:37 IST

 ಕಂದಹಾರ್ (ಅಫ್ಘಾನಿಸ್ತಾನ), ಆ. 10: ಅಫ್ಘಾನಿಸ್ತಾನದ ಹೆಲ್ಮಂಡ್ ರಾಜ್ಯದಲ್ಲಿ ತಾಲಿಬಾನ್ ಉಗ್ರರು ಮತ್ತು ಸರಕಾರಿ ಪಡೆಗಳ ನಡುವೆ ಭೀಕರ ಕಾಳಗ ನಡೆಯುತ್ತಿದ್ದು, ಸಾವಿರಾರು ಮಂದಿ ರಾಜಧಾನಿ ಕಂದಹಾರ್‌ಗೆ ಪಲಾಯನಗೈಯುತ್ತಿದ್ದಾರೆ.


ಅಮೆರಿಕದ ಸತತ ವಾಯು ದಾಳಿಗಳ ಹೊರತಾಗಿಯೂ ತಾಲಿಬಾನ್ ಬಂಡುಕೋರರು ನಗರವನ್ನು ಮುತ್ತಿಗೆ ಹಾಕಿದ್ದು ನಾಗರಿಕರು ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ.

ಲಷ್ಕರ್ ಗಾಹ್ ನಗರದ ಮೇಲಿನ ಹಿಡಿತವನ್ನು ತಾಲಿಬಾನ್ ಬಂಡುಕೋರರು ಬಿಗಿಗೊಳಿಸುತ್ತಿದ್ದು, ನಗರವು ಬಂಡುಕೋರರ ವಶವಾಗುವ ಸಾಧ್ಯತೆಗಳು ಗೋಚರಿಸಿವೆ. ಅದೇ ವೇಳೆ, ಇನ್ನೊಂದು ನಗರ ತಾಲಿಬಾನಿಗಳ ವಶವಾಗಲು ಬಿಡುವುದಿಲ್ಲ ಎಂಬುದಾಗಿ ಅಮೆರಿಕ ಮತ್ತು ಅಫ್ಘಾನ್ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News