ಕಿನ್ನಿಗೋಳಿ: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ
Update: 2016-08-10 23:10 IST
ಮುಲ್ಕಿ, ಆ.10: ವ್ಯಕ್ತಿಯೋರ್ವರು ನೇಣುಬಿಗಿದು ಅತ್ಮಹತ್ಯೆ ಮಾಡಿಕೊಂಡ ಘಟನೆ ಪಕ್ಷಿಕೆರೆ ಸಮೀಪದ ಹೊಸಕಾಡು ಎಂಬಲ್ಲಿ ನಡೆದಿದೆ. ಅತ್ಮಹತ್ಯೆ ಮಾಡಿಕೊಂಡವರನ್ನು ಸ್ಥಳೀಯ ನಿವಾಸಿ ವಿಶ್ವನಾಥ (45) ಎಂದು ಗುರುತಿಸಲಾಗಿದೆ.
ಸೀರೆಯನ್ನು ಮನೆಯ ಪಕ್ಕಾಸಿಗೆ ಹಾಕಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ವಿಶ್ವನಾಥ ಅವರ ಅಕ್ಕ, ಅವರ ಎರಡು ಮಕ್ಕಳು ಮತ್ತು ಮತ್ತೊಬ್ಬಾಕೆ ಅಕ್ಕನ ಮಗ ವಾಸಿಸುತ್ತಿದ್ದು, ಅಕ್ಕ ಕಿನ್ನಿಗೋಳಿಗೆ ಕೆಲಸಕ್ಕೆ ಮತ್ತು ಮಕ್ಕಳು ಶಾಲೆಗೆ ಹೋಗಿದ್ದ ಕಾರಣ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ.
ಸಂಜೆ ಮಕ್ಕಳು ಶಾಲೆಯಿಂದ ಮನೆಗೆ ಬಂದು ನೋಡುವಾಗ ಪ್ರಕರಣ ಬೆಳಕಿಗೆ ಬಂದಿದೆ ವಿಶ್ವನಾಥ ಅವರು ಪೈಂಟರ್ ವೃತ್ತಿಯನ್ನು ಮಾಡುತ್ತಿದ್ದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.