ಉಪ್ಪಿನಂಗಡಿ: ಅಲ್ ಅಮೀನ್ ಫ್ರೆಂಡ್ಸ್‌ನಿಂದ ಸಹಾಯಧನ ವಿತರಣೆ
Update: 2016-08-10 23:42 IST
ಉಪ್ಪಿನಂಗಡಿ, ಆ.10: ಅಲ್ ಅಮೀನ್ ಫ್ರೆಂಡ್ಸ್ ಡಿಕೆ-ಕೆಎಸ್‌ಡಿ ವತಿಯಿಂದ ಉಪ್ಪಿನಂಗಡಿ ಜುಮಾ ಮಸೀದಿಗೆ ಒಳಪಟ್ಟ ಬಡ ಹೆಣ್ಣು ಮಗಳ ಮದುವೆಗೆ 15 ಸಾವಿರ ರೂ. ಸಹಾಯಧನವನ್ನು ನೀಡಲಾಯಿತು.
ಸಹಾಯಧನವನ್ನು ಅಲ್ ಅಮೀನ್ ಫ್ರೆಂಡ್ಸ್ ಡಿಕೆ-ಕೆಎಸ್‌ಡಿಯ ಉಪಾಧ್ಯಕ್ಷ ಸಿದ್ದೀಕ್ ಕಡವಿನಬಾಗಿಲು ಮಾಲಿಕುದಿನಾರ್ ಜುಮಾ ಮಸೀದಿಯ ಕಾರ್ಯದರ್ಶಿ ಯೂಸೂಫ್ ಹಾಜಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಅಲ್ ಅಮೀನ್ ಫ್ರೆಂಡ್ಸ್‌ನ ಸಲಹೆಗಾರ ಕೆ.ಎಚ್. ಅಶ್ರಫ್ ಹನೀಫಿ ಕರಾಯ, ಹನೀಫ್ ದಾರಿಮಿ ನೆಕ್ಕಿಲಾಡಿ, ರಮ್ಲಾನ್ ಫಯಾಝ್ ಕಡವಿನಬಾಗಿಲು, ಸಂಚಾಲಕ ಶಂಶುದ್ದೀನ್ ಪಿಳಿಗೂಡ್, ಲತೀಫ್ ಕುಂಬ್ರ ಉಪಸ್ಥಿತರಿದ್ದರು.