×
Ad

ಒಂದೂವರೆ ಕೆ.ಜಿ. ಗಾಂಜಾ ಸಹಿತ ಆರೋಪಿ ಸೆರೆ

Update: 2016-08-11 11:53 IST

ಕಾಸರಗೋಡು, ಆ11: ಬೈಕ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕಾಸರಗೋಡು ಪೊಲೀಸರು ಇಂದು ಬಂಧಿಸಿದ್ದಾರೆ.

ವಿದ್ಯಾನಗರದ ಮುಹಮ್ಮದ್ ಅನಸ್(25) ಬಂಧಿತ ಆರೋಪಿ. ಈತನಿಂದ ಒಂದೂವರೆ ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಕಾಸರಗೋಡು ಪೊಲೀಸರು ಕರಂದಕ್ಕಾಡು ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ಕೃತ್ಯ ಬಯಲಾಗಿದೆ. ಈ ದಾರಿಯಾಗಿ ಬಂದ ಬೈಕನ್ನು ತಡೆದು ತಪಾಸಣೆ ನಡೆಸಿದಾಗ ಗಾಂಜಾ ಸಾಗಾಟ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News