ಅಕ್ರಮ ಮರಳುಗಾರಿಕೆ: ಪೊಲೀಸರನ್ನು ಕಂಡು ನದಿಗೆ ಹಾರಿದ ವ್ಯಕ್ತಿ ಮೃತ್ಯು
Update: 2016-08-11 12:19 IST
ಕಾಸರಗೋಡು, ಆ.11: ಮರಳುಗಾರಿಕೆ ಸಂದರ್ಭದಲ್ಲಿ ಪೊಲೀಸರನ್ನು ಕಂಡು ನದಿಗೆ ಹಾರಿದ ಓರ್ವ ಮೃತಪಟ್ಟು, ಇನ್ನಿಬ್ಬರನ್ನು ರಕ್ಷಿಸಿದ ಘಟನೆ ನೀಲೇಶ್ವರದಲ್ಲಿ ನಡೆದಿದೆ.
ಮೃತಪಟ್ಟವರನ್ನು ನೀಲೇಶ್ವರ ನೆಡುಕಂಡದ ರವಿ(48) ಎಂದು ಗುರುತಿಸಲಾಗಿದೆ. ನೀಲೇಶ್ವರ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿಯಂತೆ ನೀಲೇಶ್ವರ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭ ಮರಳುಗಾರಿಕೆ ನಡೆಸುತ್ತಿದ್ದ ಮೂವರು ನದಿಗೆ ಹಾರಿದ್ದು ಈ ಪೈಕಿ ರವಿ ಮೃತಪಟ್ಟಿದ್ದಾರೆ. ಇನ್ನುಳಿದ ಇಬ್ಬರನ್ನು ರಕ್ಷಿಸಲಾಗಿದೆ. ನೀರುಪಾಲಾದ ರವಿಯ ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಮೇಲಕ್ಕೆತ್ತಿದ್ದಾರೆ.