×
Ad

ಭಟ್ಕಳ: ವಿದ್ಯಾರ್ಥಿಗಳ ಕೈಬರಹದಲ್ಲಿ ದಿನಕರ ದೇಸಾಯಿ ಚೌಪದಿ ಸಂಗ್ರಹ ಬಿಡುಗಡೆ

Update: 2016-08-11 17:09 IST

ಭಟ್ಕಳ, ಆ.11: ಎಜುಕೇಶನ್ ಟ್ರಸ್ಟನ ವಿದ್ಯಾಭಾರತಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಕೈಬರಹದಲ್ಲಿ ಮೂಡಿಬಂದ ದಿನಕರ ದೇಸಾಯಿಯವರ ಚೌಪದಿಗಳ ಸಂಗ್ರಹದ ಪುಸ್ತಕ ಬಿಡುಗಡೆಯ ಕಾರ್ಯಕ್ರಮವು ಜರಗಿತು. ಕಾರ್ಯಕ್ರಮವನ್ನು ಟ್ಕಳ ತಾಲೂಕಾ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಗಂಗಾಧರ ನಾಯ್ಕ ಉದ್ಘಾಟಿಸಿ ನಂತರ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ದಿನಕರ ದೇಸಾಯಿ ದೀನದಲಿತರ ಹಿತ ಚಿಂತಕರಾಗಿ, ಶಿಕ್ಷಣ ತಜ್ಞರಾಗಿ, ಪತ್ರಿಕೋದ್ಯಮಿಯಾಗಿ, ಸಂಸದೀಯ ಪಟುವಾಗಿ, ಕಾರ್ಮಿಕ ನಾಯಕರಾಗಿ, ಬಡಜನತೆಗಾಗಿ ದುಡಿದ ಅಪರೂಪದ ವ್ಯಕ್ತಿ. ಮಾತ್ರವಲ್ಲ ಬರೆದಂತೆ, ನುಡಿದಂತೆ ಬದುಕಿದ ಅಪರೂಪದ ಸಾಹಿತಿ. ಅಂತಹ ಮಹಾನ್ ಕವಿಯ ಚುಟುಕುಗಳನ್ನು ವಿದ್ಯಾರ್ಥಿಗಳು ಸಂಗ್ರಹಿಸಿ ತಮ್ಮ ಕೈಬರಹದಲ್ಲೇ ಪುಸ್ತಕವೊಂದನ್ನು ಹೊರತರುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ ಹಿಂದಿ ಶಿಕ್ಷಕಿ ಸವಿತಾ ರಾವ್‌ರ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳು ಸಂಗ್ರಹಿಸಿದ ಹಿಂದಿ ಭಾಷೆಯ ಕವನ ಮತ್ತಿತರ ಉಪಯುಕ್ತ ಮಾಹಿತಿಯನ್ನೊಳಗೊಂಡ ಪುಸ್ತಕವನ್ನು ಕೂಡ ಬಿಡುಗಡೆಗೊಳಿಸಲಾಯಿತು.
 
ಭಟ್ಕಳ ಎಜುಕೇಶನ್ ಟ್ರಸ್ಟನ ಶೈಕ್ಷಣಿಕ ಸಲಹೆಗಾರ ಬಿ.ಆರ್.ಕೆ. ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಆಶಾ ಸ್ವಾಗತಿಸಿದರು. ದಿನಕರ ದೇಸಾಯಿ ಜೀವನ, ಸಾಹಿತ್ಯದ ಕುರಿತು ಕುರಿತು ವಿದ್ಯಾರ್ಥಿನಿ ರೂಪಿಕಾ ಉಳ್ವೇಕರ್ ಮಾತನಾಡಿದರು. ವಿದ್ಯಾರ್ಥಿನಿ ಪೂಜಾ ನಾಯ್ಕ ದಿನಕರರ ಚುಟುಕು ವಾಚಿಸಿ ಅರ್ಥ ಹೇಳಿದರು. ವಿದ್ಯಾರ್ಥಿನಿ ದೇವಕಿ ಪ್ರಭು ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಶಾರದಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸವಿತಾ ರಾವ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News