ದ.ಕ.: ತೆರವಾಗಿರುವ ಗ್ರಾ.ಪಂ.ಸ್ಥಾನಗಳಿಗೆ ಆ.28ರಂದು ಚುನಾವಣೆ
Update: 2016-08-11 17:33 IST
ಮಂಗಳೂರು, ಆ.11: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 10 ಗ್ರಾಮಪಂಚಾಯತ್ ಸದಸ್ಯ ಸ್ಥಾನಕ್ಕೆ ಆ.28ಕ್ಕೆ ಚುನಾವಣೆ ನಡೆಯಲಿದೆ.
ಮಂಗಳೂರು ತಾಲೂಕಿನ ಮಲ್ಲೂರು ಗ್ರಾಮಪಂಚಾಯತ್‌ನ ಎರಡು ಸದಸ್ಯ ಸ್ಥಾನಕ್ಕೆ, ಗಂಜಿಮಠ, ಅಡ್ಯಾರ್, ಬೆಳುವಾಯಿ, ಬಜಪೆ ಗ್ರಾಮಪಂಚಾಯತ್‌ನ ತಲಾ ಒಂದು ಸದಸ್ಯ ಸ್ಥಾನಕ್ಕೆ, ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮಪಂಚಾಯತ್‌ನ ಒಂದು ಸದಸ್ಯ ಸ್ಥಾನಕ್ಕೆ, ಬೆಳ್ತಂಗಡಿ ತಾಲೂಕಿನ ನಡ, ಧರ್ಮಸ್ಥಳ, ಶಿಬಾಜೆ, ಉಜಿರೆ ಗ್ರಾಮಪಂಚಾಯತ್‌ನ ಒಂದು ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಆ.16 ರಂದು ಚುನಾವಣೆ ಅಧಿಸೂಚನೆ ಹೊರಡಲಿದೆ. ನಾಮಪತ್ರ ಸಲ್ಲಿಕೆಗೆ ಆ.19 ಕೊನೆ ದಿನಾಂಕವಾಗಿದೆ. ಆ.20 ನಾಮಪತ್ರ ಪರಿಶೀಲನೆ ನಡೆಸಲಾಗುತ್ತದೆ. ನಾಮಪತ್ರ ಹಿಂದೆಗೆದುಕೊಳ್ಳಲು ಆ.22 ಕೊನೆ ದಿನಾಂಕವಾಗಿದ್ದು, ಆ.31ರಂದು ಮತ ಎಣಿಕೆ ನಡೆಯಲಿದೆ.