×
Ad

ಕಡಬ: ರೈಲಿಗೆ ತಲೆಕೊಟ್ಟು ಅಪರಿಚಿತ ವ್ಯಕ್ತಿ ಆತ್ಮಹತ್ಯೆ

Update: 2016-08-11 17:46 IST

ಕಡಬ, ಆ.11: ಇಲ್ಲಿಗೆ ಸಮೀಪದ ಕೋಡಿಂಬಾಳ ರೈಲ್ವೆ ಬ್ರಿಡ್ಜ್ ಅಡಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವರು ಗೂಡ್ಸ್ ರೈಲಿನಡಿಗೆ ತಲೆ ಇಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ.

ಸಂಜೆ ಸಮಯದಲ್ಲಿ ಸ್ಥಳೀಯರು ನಡೆದುಕೊಂಡು ಹೋಗುತ್ತಿರುವಾಗ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು, ವ್ಯಕ್ತಿಯ ಪರಿಚಯ ಇನ್ನಷ್ಟೆ ತಿಳಿದುಬರಬೇಕಿದೆ.

ರೈಲ್ವೇ ಟ್ರ್ಯಾಕ್‌ನ ಸಮೀಪದಲ್ಲೇ ಬೈಕೊಂದು (KA.21.J.8649) ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯದ್ದಾಗಿರಬಹುದೆಂದು ಶಂಕಿಸಲಾಗಿದೆ,.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News