ಪಿ.ಎ. ಕಾಲೇಜಿನಲ್ಲಿ ವನಮಹೋತ್ಸವ ಆಚರಣೆ
Update: 2016-08-11 19:19 IST
ಕೊಣಾಜೆ, ಆ.11: ಕೈರಂಗಳ ಗ್ರಾಮದ ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಕಾಲೇಜಿನ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಗುರುವಾರ ನಡೆಯಿತು.
ಸಂಸ್ಥೆಯ ಕಾರ್ಯನಿರ್ವಾಹಣಾ ನಿರ್ದೇಶಕ ಅಬ್ದುಲ್ಲಾ ಇಬ್ರಾಹೀಂ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು.
ಆಡಳಿತ ನಿರ್ದೇಶಕ ಕೆ.ಎಂ. ಹನೀಫ್, ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್, ಉಪಪ್ರಾಂಶುಪಾಲ ಡಾ.ರಮೀಝ್ ಎಂ.ಕೆ. ಹಾಗೂ ಪಿ.ಎ. ಪಾಲಿಟೆಕ್ನಿಕ್ ಕಾಲೇಜ್ ಪ್ರಾಂಶುಪಾಲ ಪ್ರೊ. ಸೂಫಿ, ವನಮಹೋತ್ಸವ ಹಾಗೂ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಶೈಕ್ಷಣಿಕ ನಿರ್ದೇಶಕ ಸರ್ಫರಾಝ್ ಹಾಶಿಂ, ಎಂಬಿಎ ನಿರ್ದೇಶಕ ಡಾ. ಬೀರಾನ್ ಮೊದೀನ್ ಹಾಗೂ ವಿವಿಧ ವಿಬಾಗಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ, ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ವಿವಿಧ ಪ್ರಭೇದದ ಸಸಿಗಳನ್ನು ಕಾಲೇಜಿನ ಆವರಣದಲ್ಲಿ ನೆಟ್ಟರು.