ಸಾಹಿತಿ ಬೋಳ ಚಿತ್ತರಂಜನ್‌ದಾಸ್ ಶೆಟ್ಟಿಯವರಿಗೆ ಶ್ರದ್ಧಾಂಜಲಿ

Update: 2016-08-11 14:16 GMT

ಮಂಗಳೂರು, ಆ.11: ಇತ್ತೀಚೆಗೆ ನಿಧನರಾದ ಸಾಹಿತಿ ಬೋಳ ಚಿತ್ತರಂಜನ್‌ದಾಸ್ ಶೆಟ್ಟಿ ಅವರಿಗೆ ನಗರದ ಕೊಡಿಯಾಲ್‌ಬೈಲ್ ಶಾರದಾ ವಿದ್ಯಾಲಯದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಬಿ. ಎ. ವಿವೇಕ್ ರೈ ಅವರು ಬೋಳ ಚಿತ್ತರಂಜನ್‌ದಾಸ್ ಶೆಟ್ಟಿ ಅವರ ಬರವಣಿಗೆಯಲ್ಲಿ ಪ್ರಯೋಗಶೀಲತೆ ಇತ್ತು. ಅನುಭವದ ಮೂಲಕ ಬರೆಯುತ್ತಿದ್ದ ಅವರ ಬರಹಶೈಲಿಯೂ ವಿಭಿನ್ನವಾದುದು .ತುಳು ಮತ್ತು ಕನ್ನಡ ಎರಡೂ ಭಾಷೆಯಲ್ಲಿಯೂ ಚಿತ್ತರಂಜನ್‌ದಾಸ್ ಶೆಟ್ಟಿ ಅವರಿಗೆ ಉತ್ತಮ ಹಿಡಿತವಿತ್ತು. ‘ಅಳಿದುಳಿದವರು’ ಮತ್ತು ‘ಒಂಟಿ ಒಬ್ಬಂಟಿ’ ಕೃತಿಯಲ್ಲಿ ಅವರ ಭಾಷಾ ಹಿಡಿತದೊಂದಿಗೆ ಅನುಭವದ ಸಾರವನ್ನು ತಿಳಿಯಬಹುದಾಗಿತ್ತು ಎಂದು ಹೇಳಿದರು.

ಜಾನಪದ ವಿದ್ವಾಂಸ ಡಾ. ಪ್ರಭಾಕರ ಜೋಷಿ ಮಾತನಾಡಿ, ಯಾವುದೇ ಪಂಥ ಸಾಹಿತ್ಯಕ್ಕೆ ಸೇರಿಕೊಳ್ಳದೇ ಉತ್ತಮ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡ ಚಿತ್ತರಂಜನ್‌ದಾಸ್ ಶೆಟ್ಟಿ ಅವರು ಯುವ ಸಾಹಿತಿಗಳಿಗೆ ಸ್ಪೂರ್ತಿಯಾಗುತ್ತಾರೆ. ಅವರ ಕೃತಿಗಳ ಅಧ್ಯಯನ ಅವಶ್ಯವಿದೆ ಎಂದು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಪ್ರಮುಖರಾದ ಚಂದ್ರಶೇಖರ್ ಶೆಟ್ಟಿ, ಅಜಿತ್‌ಕುಮಾರ್ ರೈ ಮಾಲಾಡಿ, ವಾಮನ್ ನಂದಾವರ, ಶಶಿರಾಜ್ ಕಾವೂರು ,ಪ್ರೊ.ಜಿ.ಆರ್. ರೈ, ಮಹಾಬಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News