×
Ad

ಪುತ್ತೂರು: ಒಳಚರಂಡಿ ಯೋಜನೆ ಕುರಿತು ಮಾಹಿತಿ ಕಾರ್ಯಕ್ರಮ

Update: 2016-08-11 20:21 IST

ಪುತ್ತೂರು, ಆ.11: ನಗರಸಭಾ ವ್ಯಾಪ್ತಿಯ ಒಳಚರಂಡಿ ಯೋಜನೆಯ ಕುರಿತ ಮಾಹಿತಿ ಕಾರ್ಯಕ್ರಮ ಗುರುವಾರ ಇಲ್ಲಿನ ಸಮುದಾಯ ಭವನದಲ್ಲಿ ನಗರಸಭಾಧ್ಯಕ್ಷೆ ಜಯಂತಿ ಬಲ್ನಾಡು ಅವರ ನೇತೃತ್ವದಲ್ಲಿ ನಡೆಯಿತು.

ನಗರಸಭಾ ವ್ಯಾಪ್ತಿಯಲ್ಲಿನ ಒಳಚರಂಡಿಗೆ 75 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಬಗ್ಗೆ ಮಾಹಿತಿ ನೀಡಿದ ಕೆಯುಐಡಿಎಫ್‌ಸಿ ಉಪನಿರ್ದೇಶಕ ಪ್ರಭಾಕರ ಶರ್ಮ, ಈ ಬಗ್ಗೆ ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗಬೇಕಾಗಿಲ್ಲ. ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಪ್ರತಿಯೊಬ್ಬರ ಜಮೀನಿಗೆ ಆಗಮಿಸಿ ಸ್ಥಳ ಗುರುತು ಮಾಡಲಾಗುವುದು. ಯೋಜನೆಯಂತೆ 5 ಮೀಟರ್ ಜಾಗದಲ್ಲಿ ಒಳಚರಂಡಿ ನಿರ್ಮಾಣವಾಗಲಿದೆ. ಇದಕ್ಕಿಂತ ಹೆಚ್ಚು ಜಾಗವನ್ನು ಎಲ್ಲಿಯೂ ಸ್ವಾಧೀನ ಮಾಡಿಕೊಳ್ಳುವುದಿಲ್ಲ. ಒಳಚರಂಡಿ ಮೇಲ್ಭಾಗದಲ್ಲಿ ರಸ್ತೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ತಹಶೀಲ್ದಾರ್ ಪುಟ್ಟ ಶೆಟ್ಟಿ, ಉಪಾಧ್ಯಕ್ಷ ವಿಶ್ವನಾಥ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಭಂಡಾರಿ, ಪೌರಾಯುಕ್ತೆ ರೇಖಾ ಜೆ. ಶೆಟ್ಟಿ, ಸದಸ್ಯರಾದ ಮುಹಮ್ಮದಾಲಿ, ರಾಮಣ್ಣ ಗೌಡ ಹಲಂಗ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News