×
Ad

ನಿರ್ಲಕ್ಷದ ಚಾಲನೆ: ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲು

Update: 2016-08-11 20:33 IST

ಮಂಗಳೂರು,ಆ.11:ನಗರದ ಅಂಬೇಡ್ಕರ್ ವೃತ್ತದಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸಿ ಪೊಲೀಸರ ಸೂಚನೆಯನ್ನು ನಿರ್ಲಕ್ಷಿಸಿ ಕಂಕನಾಡಿ ಕರಾವಳಿ ವೃತ್ತದವರೆಗೆ ಅಪಾಯಕಾರಿಯಾಗಿ ಲಾರಿಯನ್ನು ಚಲಾಯಿಸುತ್ತಿದ್ದ ಚಾಲಕನ ಮೇಲೆ ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಾವುಟಗುಡ್ಡೆ ಕಡೆಯಿಂದ ಬಲ್ಮಠ ಸರ್ಕಲ್ ಕಡೆಗೆ ಚಾಲಕ ಲಾರಿಯನ್ನು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದಿದ್ದು, ಅಂಬೇಡ್ಕರ್ ಸರ್ಕಲ್‌ನಲ್ಲಿ ಸಿಗ್ನಲ್ ಉಲ್ಲಂಘಿಸಿ ಲಾರಿಯನ್ನು ಚಲಾಯಿಸಿಕೊಂಡು ಬರುತ್ತಿರುವುದನ್ನು ಕಂಡು ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಆನಂದ್ ನಿಲ್ಲಲು ಸೂಚನೆ ನೀಡಿದರೂ ನಿಲ್ಲಿಸದೇ ಬಲ್ಮಠ ಕಡೆಗೆ ಚಲಾಯಿಸಿಕೊಂಡು ಹೋಗಿದ್ದ.

ಬೆಂದೂರ್‌ವೆಲ್‌ನಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಇಮ್ತಿಯಾಝ್ ನಿಲ್ಲಿಸಲು ಸೂಚನೇ ನೀಡಿದಾಗ , ಅಲ್ಲಿಯೂ ನಿಲ್ಲಿಸದೇ ಕರಾವಳಿ ಸರ್ಕಲ್ ಕಡೆ ಹೋಗಿದ್ದ. ಕರಾವಳಿ ಪಾಯಿಂಟ್‌ನಲ್ಲಿ ಕರ್ತವ್ಯದಲ್ಲಿದ್ದ ಪುಟ್ಟರಾಮ ಇತರೇ ವಾಹನಗಳನ್ನು ನಿಲ್ಲಿಸಿ ಬ್ಲಾಕ್ ಮಾಡಿ ನಿಲ್ಲಿಸಿ ಪ್ರಕರಣ ದಾಖಲಿಸಿದ್ದಾರೆ. ಈ ಸಂದರ್ಭ ಲಾರಿ ಚಾಲಕ ಉಡಾಫೆಯಿಂದ ಮಾತನಾಡಿ, ಹೆಸರು, ವಿಳಾಸ ತಿಳಿಸಲು ನಿರಾಕರಿಸಿದ್ದಾನೆ.

ಲಾರಿ ಚಾಲಕ ಯೂನಿಫಾರಂ ಧರಿಸದೇ, ಲಾರಿಗೆ ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿರುವ ಬಗ್ಗೆಯೂ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News