×
Ad

ಅಸಾರಾಮ್ ಅರ್ಜಿ ತಳ್ಳಿಹಾಕಿದ ಸುಪ್ರೀಂಕೋರ್ಟ್

Update: 2016-08-11 23:10 IST

 ಹೊಸದಿಲ್ಲಿ, ಆ.11: ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪುಗೆ ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ಬಿಡುಗಡೆ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ತಿರಸ್ಕರಿಸಿದೆ.

ಅಸಾರಾಮ್ ಅನಾರೋಗ್ಯದ ಬಗ್ಗೆ ತಪಾಸಣೆ ನಡೆಸಲು ತ್ರಿಸದಸ್ಯ ವೈದ್ಯಕೀಯ ಮಂಡಳಿಯೊಂದನ್ನು ರಚಿಸುವಂತೆ ನ್ಯಾಯಾ ಲಯವು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಗೆ ಆದೇಶಿಸಿದೆ.
   ಅಸಾರಾಂಗೆ ಜಾಮೀನು ಬಿಡುಗಡೆಯನ್ನು ತಿರಸ್ಕರಿಸಿರುವ ರಾಜಸ್ಥಾನ ಹೈಕೋರ್ಟ್ ನ ಆದೇಶಕ್ಕೆ ಹಸ್ತಕ್ಷೇಪ ನಡೆಸಲು ನ್ಯಾಯ ಮೂರ್ತಿಗಳಾದ ಮದನ್ ಬಿ.ಲೋಕುರ್ ಹಾಗೂ ಆರ್.ಕೆ.ಅಗರ್‌ವಾಲ್ ಅವರನ್ನೊಳ ಗೊಂಡ ಸುಪ್ರೀಂಕೋರ್ಟ್ ನ್ಯಾಯ ಪೀಠವು ನಿರಾಕರಿಸಿದೆ. ಅಸಾರಾಂ ಅವರ ಆರೋಗ್ಯ ಪರಿ ಸ್ಥಿತಿಯ ಬಗ್ಗೆ 10 ದಿನ ಗಳೊಳಗೆ ವರದಿಯನ್ನು ಏಮ್ಸ್‌ನ ತ್ರಿಸದಸ್ಯ ವೈದ್ಯಕೀಯ ಆಯೋಗಕ್ಕೆ ನ್ಯಾಯಪೀಠವು ಸೂಚಿಸಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಕೇರಳದಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯಲು ತನಗೆ ಒಂದೆರಡು ತಿಂಗಳುಗಳವರೆಗೆ ಮಧ್ಯಾಂತರ ಜಾಮೀನು ನೀಡಬೇಕೆಂದು ಕೋರಿ ಅಸಾರಾಮ್ ಬಾಪು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News