ಬಲ್ಗೇರಿಯದಿಂದ ಟರ್ಕಿಗೆ ಫತೇವುಲ್ಲಾ ಬೆಂಬಲಿಗನ ಗಡಿಪಾರು
Update: 2016-08-11 23:51 IST
ಸೋಫಿಯ (ಬಲ್ಗೇರಿಯ), ಆ. 11: ಅಮೆರಿಕದಲ್ಲಿ ನೆಲೆಸಿರುವ ಟರ್ಕಿಯ ಧರ್ಮಗುರು ಫತೇವುಲ್ಲಾ ಗುಲೇನ್‌ರ ಬೆಂಬಲಿಗನೋರ್ವನನ್ನು ಬಲ್ಗೇರಿಯ ಬುಧವಾರ ಟರ್ಕಿಗೆ ಗಡಿಪಾರು ಮಾಡಿದೆ.
ಕಳೆದ ತಿಂಗಳು ನಡೆದ ವಿಫಲ ಕ್ಷಿಪ್ರಕ್ರಾಂತಿಗೆ ಫತೇವುಲ್ಲಾ ಕಾರಣ ಎಂಬುದಾಗಿ ಟರ್ಕಿ ಆರೋಪಿಸಿದೆ.
43 ವರ್ಷದ ಉದ್ಯಮಿ ಅಬ್ದುಲ್ಲಾ ಬುಯುಕ್‌ಗೆ ರಾಜಕೀಯ ಆಶ್ರಯ ನಿರಾಕರಿಸಿದ ಬಳಿಕ ಬಲ್ಗೇರಿಯ ಬುಧವಾರ ಅವರನ್ನು ಗಡಿಪಾರು ಮಾಡಿದೆ.
ಇದಕ್ಕೆ ಬಲ್ಗೇರಿಯದ ಮಾಧ್ಯಮ ಲೋಕ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬಲ್ಗೇರಿಯವು ಟರ್ಕಿಯ ಒತ್ತಡಕ್ಕೆ ಮಣಿದಿದೆ ಹಾಗೂ ಈ ವಿಷಯದಲ್ಲಿ ಅದು ಸರಿಯಾದ ವಿಧಿವಿಧಾನಗಳನ್ನು ಅನುಸರಿಸಿಲ್ಲ ಎಂಬುದಾಗಿ ಟೀಕಾಕಾರರು ಆರೋಪಿಸಿದ್ದಾರೆ.