ದನ ಸಾಗಾಟ: ಇಬ್ಬರ ಬಂಧನ
Update: 2016-08-12 00:18 IST
ಬೆಳ್ತಂಗಡಿ, ಆ.11: ಧರ್ಮಸ್ಥಳ ಸಮೀಪ ಪುದುವೆಟ್ಟಿನಲ್ಲಿ ಟೆಂಪೊ ರಿಕ್ಷಾದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ರಹೀಂ ಮತ್ತು ಮೋನು ಎಂಬವರಾಗಿದ್ದಾರೆ. ಪೊಲೀಸರು ಇವರಿಂದ ಒಂದು ದನ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.