ವನೌತುವಿನಲ್ಲಿ ಭೂಕಂಪ ; ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.6ರಷ್ಟು ದಾಖಲು
Update: 2016-08-12 10:33 IST
ಸಿಡ್ನಿ, ಆ.12: ದಕ್ಷಿಣ ಪೆಸಿಫಿಕ್ ಐಲ್ಯಾಂಡ್ ದೇಶವಾದ ವನೌತುವಿನಲ್ಲಿ ಇಂದು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.6ರಷ್ಟು ದಾಖಲಾಗಿದೆ .ಆದರೆ ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಗಿಲ್ಲ.
ದಕ್ಷಿಣ ಪೆಸಿಫಿಕ್ ಐಲ್ಯಾಂಡ್ನ ಆಗ್ನೇಯ ಭಾಗದ 535 ಕಿಲೋ ಮೀಟರ್ ದೂರದ ವ್ಯಾಪ್ತಿಯಲ್ಲಿ ಕಂಪನದ ತೀವ್ರತೆ ಜಾಸ್ತಿಯಾಗಿ ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ. ಭೂಕಂಪನ ಸಂಭವಿಸಿದ ಸನಿಹದಲ್ಲಿರುವ ಕರಾವಳಿ ತೀರಗಳಲ್ಲಿ ಈಗಾಗಲೇ ಸುನಾಮಿ ಎಚ್ಚರಿಕೆ ನೀಡಲಾಗಿದೆ.