ಮಾನವ ಬಾಂಬ್ ಎಂದು ಆರೋಪಿಸಿ 23 ವರ್ಷದ ಯುವಕನ ಹತ್ಯೆ
ಟೊರೊಂಟೊ,ಆ.12: ಭಯೋತ್ಪಾದಕ ಎಂಬ ಸಂಶಯದಲ್ಲಿ ಕೆನಡದಲ್ಲಿ 23 ವರ್ಷದ ಯುವಕನೊಬ್ಬನನ್ನು ದಕ್ಷಿಣ ಅಂಟೋರಿಯದಲ್ಲಿ ಗುರುವಾರ ಪೊಲೀಸರು ಗುಂಡಿಟ್ಟುಕೊಂದು ಹಾಕಿದ್ದಾರೆಂದು ವರದಿಯಾಗಿದೆ. ಆರೋನ್ ಎಂಬ ಚಾಲಕ ಪೊಲೀಸಿನ ಗುಂಡೇಟಿಗೀಡಾಗಿ ಮೃತನಾದ ವ್ಯಕ್ತಿಯಾಗಿದ್ದು, ಮಾನವಬಾಂಬ್ ಆಗಿ ಸ್ಫೋಟಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾನೆಂದು ತಿಳಿದು ಬಂದದ್ದರಿಂದ ಗುಂಡು ಹಾರಿಸಿ ಆತನನ್ನು ಸಾಯಿಸಲಾಯಿತು ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸ್ಫೋಟ ನಡೆಸಲು ಪ್ರಯತ್ನಿಸಿದ್ದ ಈತನ ಹತ್ತಿರದಲ್ಲಿದ್ದ ಇನ್ನೊಬ್ಬನಿಗೂ ಗಾಯಗಳಾದ್ದರಿಂದ ಪೊಲೀಸರು ಗುಂಡುಹಾರಿಸಿ ಆತನನ್ನು ನೆಲಕ್ಕುರುಳಿಸಿದರು ಎಂದು ಸಿಬಿಸಿ ನ್ಯೂಸ್ ವರದಿಮಾಡಿದೆ. ಪೊಲೀಸ್ ಕೇಂದ್ರವನ್ನು ಸ್ಫೋಟಿಸಲು ಈತ ಸಿದ್ಧತೆ ನಡೆಸಿದ್ದ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಈತನ ಮನೆಗೆ ಪೊಲೀಸರು ದಾಳಿ ಮಾಡಿ ಅಲ್ಲಿಯೇ ಆತನಿಗೆ ಗುಂಡು ಹಾರಿಸಲಾಗಿದೆ. ಮೃತ ಆರೋನ್ ಕುರಿತು ಹೆಚ್ಚಿನ ವಿವರಗಳನ್ನು ಪೊಲೀಸರು ಬಹಿರಂಗ ಪಡಿಸಿಲ್ಲ. ಆದರೆ ಐಸಿಸ್‌ಗೆ ಬಹಿರಂಗವಾಗಿ ಬೆಂಬಲ ಸಾರಿದ್ದಾನೆ ಎಂಬ ನಿಟ್ಟಿನಲ್ಲಿ ಕಳೆದ ವರ್ಷ ಈತನನ್ನು ಪೊಲೀಸರು ಬಂಧಿಸಿದ್ದರು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಇದು ದೃಢೀಕರಣವಾಗಿಲ್ಲ ಎಂದುವರದಿ ತಿಳಿಸಿದೆ.