"ಐಸಿಸ್‌ಗೆ ಸೇರಿಲ್ಲ,ಯಮನ್‌ನಲ್ಲಿ ಅಧ್ಯಯನ ಮುಗಿದೊಡನೆ ಊರಿಗೆ ಬರುವೆ": ಮಲಪ್ಪುರಂ ವ್ಯಕ್ತಿಯಿಂದ ಮೆಸೇಜ್!
ಮಲಪ್ಪುರಂ,ಆ.12: ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ಗೆ ತಾನು ಸೇರಿಲ್ಲ ಎಂದು ಮಲಪ್ಪುರಂನ ಅಬ್ದುಲ್ಲ ಯಾನೆ ಅಖಿಲ್ ಇಮೇಲ್ ಮುಖಾಂತರ ತನಿಖಾಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾನೆ ಎಂದು ವರದಿಯಾಗಿದೆ. ಫೋನ್ ಮೂಲಕ ಮನೆಯವರಿಗೂ ಈ ವಿಷಯವನ್ನು ಆತ ತಿಳಿಸಿದ್ದು, ಮಲಪ್ಪುರಂನ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೂ, ಪೆರಿಂದಲ್‌ಮಣ್ಣ ಸರ್ಕಲ್ ಇನ್‌ಸ್ಪೆಕ್ಟರ್ ರಿಗೂ ಅಖಿಲ್ ಸಂದೇಶ ರವಾನಿಸಿದ್ದಾನೆ ಎನ್ನಲಾಗಿದೆ.
ಐಸಿಸ್‌ನೊಂದಿಗೆ ತನಿಗೆ ಯಾವುದೇ ಸಂಬಂಧವಿಲ್ಲ ಎಂದು ಸಂದೇಶ ಮೂಲಕ ಹೇಳಿದ್ದಾನೆ. ಯಮನ್‌ನಲ್ಲಿ ಅಧ್ಯಯನ ಮುಗಿದರೆ ಊರಿಗೆ ಬರುತ್ತೇನೆಂದು ಪುತ್ರ ಫೋನ್ ಮಾಡಿ ತಿಳಿಸಿದ್ದಾನೆಂದು ಅಖಿಲ್ ತಂದೆ ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಇಂಜಿನಿಯರಿಂಗ್ ಕಲಿಯುತ್ತಿದ್ದ ವೇಳೆ ಮತಾಂತರಗೊಂಡು ಅಬ್ದುಲ್ಲ ಎಂಬ ಹೆಸರನ್ನು ಸ್ವೀಕರಿಸಿದ್ದ ಎನ್ನಲಾಗಿದೆ. ಇಮೇಲ್ ಎಲ್ಲಿಂದ ಬಂದಿದೆಯೆಂದು ಪೊಲೀಸರು ತಪಾಸಣೆ ನಡೆಸುತ್ತಿದ್ದು, ಅಖಿಲ್ ಮನೆಗೆ ಕರೆಮಾಡಿರುವ ಫೋನ್ ನಂಬರ್‌ನ್ನು ಕೂಡಾ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.