ಶಾರದಾ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಪದಗ್ರಹಣ

Update: 2016-08-12 12:22 GMT

ಸುಳ್ಯ, ಆ.12: ಸುಳ್ಯದ ಶ್ರೀ ಶಾರದಾ ಮಹಿಳಾ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪದಗ್ರಹಣ ಅಮೃತ ಭವನದಲ್ಲಿ ನಡೆಯಿತು. ಪುತ್ತೂರಿನ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಕಾರ್ಯಕ್ರಮ ಉದ್ಘಾಟಿಸಿದರು.

ತಮ್ಮ ಹಿತಾಸಕ್ತಿಗಳನ್ನು ಕಾಪಾಡುವುದಕ್ಕೆ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ನಿತ್ಯ ಪ್ರತಿಭಟನೆಗಳನ್ನು ನಡೆಸುವ ಮೂಲಕ ಋಣಾತ್ಮಕ ಭಾವನೆಗಳನ್ನು ಹೊಂದಿರುವ ಸಂಘಟನೆಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ವಿದ್ಯಾರ್ಥಿ ಸಂಘಗಳು ಧನಾತ್ಮಕವಾಗಿ ಚಿಂತನೆ ಮಾಡಬೇಕಾಗಿದೆ. ಮೊಬೈಲ್ ಬಳಕೆ ಮೇಲೆ ನಿಯಂತ್ರಣ, ದುರ್ವ್ಯಸನಗಳ ವಿರುದ್ಧ ಜಾಗೃತಿ, ಊರು, ಕೃಷಿ, ಆರಾಧನೆ, ಸಂಸ್ಕೃತಿ, ಪರಂಪರೆ ಸಂರಕ್ಷಣೆ ಮಾಡುವ ಮೂಲಕ ಸಮಾಜಕ್ಕೂ ದೇಶಕ್ಕೂ ಕೊಡುಗೆ ನೀಡುವಂತಾಗಬೇಕು. ಯಾವುದಕ್ಕೂ ಮನಸ್ಸು ಮುಖ್ಯ ಎಂದ ಅವರು ವಿದ್ಯಾರ್ಥಿ ಸಂಘದಿಂದ ರಚನಾತ್ಮಕ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಹಾರೈಸಿದರು.

ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಾನವನ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಸಾಯಿಗೀತಾ ಅತಿಥಿಗಳಾಗಿದ್ದರು. ಕಾಲೇಜಿನ ಸಂಚಾಲಕಿ ಡಾ.ರೇವತಿ ನಂದನ್, ಪ್ರಾಂಶುಪಾಲೆ ಜೋತ್ಸ್ನಾ, ವಿದ್ಯಾರ್ಥಿ ಕ್ಷೇಮಾಧಿಕಾರಿ ವಿಜಯಾ, ಸಾಂಸ್ಕೃತಿಕ ಸಂಘದ ಸಂಚಾಲಕಿ ಖತೀಜಾ, ಸಾಹಿತ್ಯ ಸಂಘದ ಸಂಚಾಲಕಿ ಶಾಂತಮಣಿ, ಕ್ರೀಡಾ ಸಂಘದ ಸಂಚಾಲಕಿ ವಿದ್ಯಾ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸವಿತಾ, ಕ್ರೀಡಾ ಕಾರ್ಯದರ್ಶಿ ಮೈತ್ರಿ, ಸಾಂಸ್ಕೃತಿಕ ಕಾರ್ಯದರ್ಶಿ ವಂದನಾ ವೇದಿಕೆಯಲ್ಲಿದ್ದರು.

ಸವಿತಾ ಸ್ವಾಗತಿಸಿ, ಐಶ್ವರ್ಯಾ ವಂದಿಸಿದರು. ನಫೀಸತ್ ಸುಸೀಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News